ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಕಳ್ಳರಿಬ್ಬರು ಕ್ಯಾಶ್ ಟೇಬಲ್ ನಲ್ಲಿದ್ದ ಮಾಲೀಕನ ಮೊಬೈಲ್ ಎಗರಿಸಿಕೊಂಡು ಪರಾರಿಯಾದ ಘಟನೆ ಕೊಡಂಕೂರು ಮಹಾಲಕ್ಷ್ಮೀ ಹೋಟೆಲ್ ನಲ್ಲಿ ನಡೆದಿದೆ.
ಬಿಲ್ ಕೊಡುವ ಸಂದರ್ಭದಲ್ಲಿ ಮಾಲೀಕನ ಗಮನ ಬೇರೆಡೆಗೆ ಸೆಳೆದು ಕ್ಯಾಶ್ ಟೇಬಲ್ ಮೇಲಿದ್ದ ಮೊಬೈಲ್ ಅನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮೊಬೈಲ್ ಕಾಣದಿದ್ದಾಗ ಮಾಲೀಕರು ಹೋಟೆಲ್ ನ ಸಿಸಿಟಿವಿ ಪರಿಶೀಲಿಸಿದ್ದು, ಆಗ ಇಬ್ಬರು ಖದೀಮ ಕಳ್ಳರ ಕೃತ್ಯ ಬೆಳಕಿಗೆ ಬಂದಿದೆ.





