Home Crime ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರು ಅರೆಸ್ಟ್…!!

ಗಾಂಜಾ ಮಾರಾಟಕ್ಕೆ ಯತ್ನ : ಇಬ್ಬರು ಅರೆಸ್ಟ್…!!

ಮಂಗಳೂರು : ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾದಕ ವಸ್ತು ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಪ್ಪಳದ ಶೇಕ್ ಅರ್ಬಾಜ್ ಹಾಗೂ ರಶೀದ್ ಆಲ್ವಿನ್ ಬಂಧಿತ ಆರೋಪಿಗಳು ಎಂದು ತಿಳಿಯಲಾಗಿದೆ.

ಮಾ. 12 ರಂದು ಉಳ್ಳಾಲ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡಕ್ಕೆ ಉಳ್ಳಾಲ ತಾಲೂಕು ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಗೌಂಡ್ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ಕೇರಳ ರಾಜ್ಯದ ಮಂಜೇಶ್ವರದ ಅಲ್ತಾಫ್, ಉಪ್ಪಳದ ಶೇಕ್ ಅರ್ಬಾಜ್ ಹಾಗೂ ರಶೀದ್ ಆಲ್ವಿನ್ ಎಂಬವರು ಮಾದಕ ವಸ್ತು ಗಾಂಜಾವನ್ನು ತಂದು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ಲಭಿಸಿತು. ಮಾಹಿತಿ ಮೇರೆಗೆ ಪೊಲೀಸರು ಪಂಚರ ಸಮ್ಮುಖದಲ್ಲಿ ಸ್ಥಳಕ್ಕೆ ಧಾಳಿ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು.

ಆರೋಪಿಗಳಿಂದ ಒಟ್ಟು ರೂ.51,500 ಮೌಲ್ಯದ ನಿಷೇಧಿತ ಮಾದಕ ವಸ್ತುವಾದ 1 ಕೆಜಿ 110 ಗ್ರಾಂ ತೂಕದ ಗಾಂಜಾ, ರೂ.520 ನಗದು, ಒಂದು ರೆಡ್‌ಮಿ ಮೊಬೈಲ್ ಫೋನ್, ಒಂದು ವಿವೋ ಮೊಬೈಲ್ ಫೋನ್ ಸೇರಿದಂತೆ ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಧಾಳಿ ವೇಳೆ ಆರೋಪಿ ಅಲ್ತಾಫ್ ಎಂಬಾತನು ಸ್ಕೂಟರ್ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅ.ಕ್ರ.49/2026ರಡಿ ಕಲಂ 8(c), 20(b) ಎನ್.ಡಿ.ಪಿ.ಎಸ್ ಕಾಯ್ದೆ 1985ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.