ಮೈಸೂರು : ಮದ್ಯ ಸೇವನೆಗೆ ಹಣ ನೀಡಲಿಲ್ಲ ಎಂದು ತಾಯಿಯನ್ನೇ ಪಾಪಿ ಪುತ್ರ ಕೊಂದ ಘಟನೆ ಪಿರಿಯಾಪಟ್ಟಣ ತಾಲ್ಲೂಕು ನವಿಲೂರ ಗ್ರಾಮದಲ್ಲಿ ನಡೆದಿದೆ.
ತಾಯಿ ಬಳಿಯಿದ್ದ 90 ಸಾವಿರ ಹಣಕ್ಕಾಗಿ ಮಗ ಹತ್ಯೆಗೈದಿದ್ದಾನೆ. ತಂದೆಗೆ ಹುಷಾರಿಲ್ಲದ ಕಾರಣ ತಾಯಿ ಹಣ ಕೂಡಿಟ್ಟಿದ್ದಾರೆ. ದನಗಳನ್ನ ಮಾರಿ ತಾಯಿ ಹಣ ಕೂಡಿಟ್ಟಿದ್ದರು. ಹಣ ನೀಡುವಂತೆ ಪದೇ ಪದೇ ಪುತ್ರ ಪೀಡಿಸುತ್ತಿದ್ದನು.
ಕೈಯಲ್ಲಿ ಹೊಡೆದು ಮಗ ಕೊಲೆ ಮಾಡಿದ್ದಾನೆ. ತಂದೆ ಆಸ್ಪತ್ರೆಗೆ ತೆರಳಿದ ವೇಳೆ ಕೃತ್ಯ ನಡೆದಿದೆ. ಈ ಕುರಿತು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.