ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಮಹಿಳೆಯೊಬ್ಬರು ಮನೆಯಲ್ಲಿ ದೇವರಿಗೆ ದೀಪ ಹಚ್ಚುವ ಸಮಯ ಆಕಸ್ಮಿಕವಾಗಿ ದೀಪದ ಬೆಂಕಿ ಶೋಭಾರವರು ಧರಿಸಿದ ನೈಟಿಗೆ ತಗುಲಿ ಬೆಂಕಿ ಹತ್ತಿಕೊಂಡು ಮೈ ಮುಖ ಸುಟ್ಟು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆ ಶೋಭಾ ಎಂದು ತಿಳಿಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಪ್ರಕಾಶ್ ಗುಡಿಗಾರ್, ಉಪ್ಪುಂದ ಬೈಂದೂರು ಇವರ ದೊಡ್ಡಮ್ಮ ಶ್ರೀಮತಿ ಶೋಭಾ(69) ರವರು ಮಗ ಸೊಸೆಯೊಂದಿಗೆ ಉಪ್ಪುಂದ ಪೇಟೆಯಲ್ಲಿ ವಾಸವಾಗಿದ್ದು, ದಿನಾಂಕ 05/01/2026 ರಂದು ಸಂಜೆ 06:00 ಗಂಟೆಗೆ ವಾಸದ ಬಾಡಿಗೆ ಮನೆಯಲ್ಲಿ ದೇವರಿಗೆ ದೀಪ ಹಚ್ಚುವ ಸಮಯ ಆಕಸ್ಮಿಕವಾಗಿ ದೀಪದ ಬೆಂಕಿ ಶೋಭಾರವರು ಧರಿಸಿದ ನೈಟಿಗೆ ತಗುಲಿ ಬೆಂಕಿ ಹತ್ತಿಕೊಂಡು ಮೈ ಮುಖ ಸುಟ್ಟಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ ಮಂಗಳೂರಿಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆಗೆ ಸ್ಪಂದಿಸದೇ ದಿನಾಂಕ 11/01/2026 ರಂದು ಬೆಳಿಗ್ಗೆ 09:42 ಗಂಟೆಗೆ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 02/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



