Home Crime ಕುಂದಾಪುರದಲ್ಲಿ ರೌಡಿ ಶೀಟರ್ ಅಬುಬಕ್ಕರ್ ಬಂಧನ: ಜಾಮೀನು ರದ್ದು, ನ್ಯಾಯಾಂಗ ಬಂಧನಕ್ಕೆ ಆದೇಶ

ಕುಂದಾಪುರದಲ್ಲಿ ರೌಡಿ ಶೀಟರ್ ಅಬುಬಕ್ಕರ್ ಬಂಧನ: ಜಾಮೀನು ರದ್ದು, ನ್ಯಾಯಾಂಗ ಬಂಧನಕ್ಕೆ ಆದೇಶ

ಕುಂದಾಪುರ, ಮಾರ್ಚ್ 25:ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ನಿವಾಸಿ ಅಬುಬಕ್ಕರ್ (48) ಅವರನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇವರು ರೌಡಿ ಶೀಟರ್ ಹಾಗೂ MOB ಆಸಾಮಿಯಾಗಿದ್ದು, ಇವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ಕ್ರಮಾಂಕ 74/2024 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) r/w 3(5) ಹಾಗೂ ಕರ್ನಾಟಕ ಪಶುವಧ ನಿಷೇಧ ಮತ್ತು ಜಾನುವಾರು ಸಂರಕ್ಷಣೆ ಅಧಿನಿಯಮ–2020ರ ಕಲಂ 5 ಮತ್ತು 12, ಜೊತೆಗೆ ಪ್ರಾಣಿ ಕ್ರೂರತೆ ತಡೆ ಕಾಯ್ದೆ–1960ರ ಕಲಂ 11(1)(D) ಅಡಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಅಬುಬಕ್ಕರ್ ಅವರು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ, ಜಾಮೀನು ರದ್ದುಗೊಳಿಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿ ಪಡೆದಿದ್ದ ಜಾಮೀನನ್ನು ರದ್ದುಗೊಳಿಸಿ ರಿಮಾಂಡ್ ವಾರಂಟ್ ಹೊರಡಿಸಿದೆ.

ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಏಪ್ರಿಲ್ 7, 2026ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.