ಕುಂದಾಪುರ: ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಬಳಿಕ, ನ್ಯಾಯಾಲಯವು ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರ ಠಾಣಾ ಅಕ್ರಮ ಸಂಖ್ಯೆ 49/2015ರ ಪ್ರಕರಣದಲ್ಲಿ ಶಶಿಕಾಂತ ಶೆಟ್ಟಿ (ತಂದೆ: ಚಂದ್ರಪ್ರಕಾಶ ಶೆಟ್ಟಿ), ಅಕ್ಕುಂಜೆ, ಸಿದ್ದಾಪುರ ಗ್ರಾಮ, ಕುಂದಾಪುರ ತಾಲೂಕು ನಿವಾಸಿಯಾಗಿದ್ದು, ಭಾರತೀಯ ದಂಡ ಸಂಹಿತೆಯ ಕಲಂ 498(A), 323, 504, 506 ಹಾಗೂ ಡೌರಿ ಪ್ರೊಹಿಬಿಷನ್ ಕಾಯ್ದೆಯ ಕಲಂ 3, 4, 6ರಡಿ ಆರೋಪಿಯಾಗಿದ್ದನು.
ಪ್ರಕರಣ ದಾಖಲಾದ ನಂತರ ಆರೋಪಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ, 2024ರಲ್ಲಿ ಮಾನ್ಯ ನ್ಯಾಯಾಲಯವು LPC ವಾರಂಟ್ (03/2024) ಹೊರಡಿಸಿತ್ತು.
ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಬಂಧಿಸಿ, 01 ಮಾರ್ಚ್ 2026ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಬಳಿಕ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತು.
ಪ್ರಕರಣದ ವಿಚಾರಣೆ ಪೂರ್ಣಗೊಂಡು, 24 ಮಾರ್ಚ್ 2026ರಂದು ನ್ಯಾಯಾಲಯವು ಅಂತಿಮ ತೀರ್ಪು ನೀಡಿದ್ದು, ಆರೋಪಿಗೆ 2 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.





