Home Crime ಆಟೋಚಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ…!!

ಆಟೋಚಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ…!!

ಮಣಿಪಾಲ : ಜೀವನದಲ್ಲಿ ಜುಗುಪ್ಸೆಗೊಂಡ ಆಟೋಚಾಲಕರೊಬ್ಬರು ಅಂಗಡಿ ಕೋಣೆಗಳೊಳಗಿನ ಜಂತಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಣಿಪಾಲ ದಶರಥನಗರದಲ್ಲಿ ನಡೆದಿದೆ.

ವ್ಯಕ್ತಿ ಆತ್ಮಹತ್ಯೆಗೈದು ನಾಲ್ಕು ದಿನಗಳು ಕಳೆದಿರವ ಶಂಕೆ ವ್ಯಕ್ತವಾಗಿದೆ. ಶವ ಕೊಳೆತು ಪರಿಸರದಲ್ಲಿ ವಾಸನೆ ಹಬ್ಬಿದರಿಂದ ಘಟನೆ ಸಾರ್ವಜನಿಕರ ಗಮನಕ್ಕೆ ಬಂದಿದೆ.

ಮೃತ ಆಟೋಚಾಲಕ ಮಂಜುನಾಥ್ ಕಾಮತ್ (45 ವ) ಎಂದು ತಿಳಿದು ಬಂದಿದೆ. ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ವಾಮನ, ಶ್ರವಣ ಕಾನೂನು ಪ್ರಕ್ರಿಯೆ ನಡೆಸಿದರು.

ಮಣಿಪಾಲದ ವಿಧಿವಿಜ್ಞಾನ ತಜ್ಞರು ಸ್ಥಳದಲ್ಲಿದ್ದು ಪರಿಶೀಲಿಸಿದರು. ಕಳೇಬರವನ್ನು ಕೆಳಗಿಳಿಸಿ ಕೆ.ಎಂ.ಸಿ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.