ಶಿರ್ವ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಮನೆಯೊಂದರಲ್ಲಿ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.
ಶರ್ವ ನಿವಾಸಿ ಪವಿತ್ರ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ.
ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದಿ: ಶ್ರೀಮತಿ ಪವಿತ್ರ (29), ಶಿರ್ವ ಗ್ರಾಮ ಇವರು ದಿನಾಂಕ:27.06.2025 ರಂದು ರಾತ್ರಿ 09:45 ಗಂಟೆಗೆ ಮನೆಯ ಬಾಗಿಲನ್ನು ಭದ್ರಪಡಿಸಿ ರೂಮ್‌ನ ಒಳಗಡೆ ಮಲಗಿದ್ದು ದಿನಾಂಕ: 28.06.2025 ರಂದು ಬೆಳಿಗ್ಗೆ 06:20 ಗಂಟೆಗೆ ಎದ್ದು ನೋಡಿದಾಗ ಮಲಗಿದ್ದ ಕೋಣೆಯ ಮರದ ಕಬಾಟಿನ ಬಾಗಿಲು ತೆರೆದಿರುತ್ತದೆ. ಮನೆಯ ಇನ್ನೊಂದು ರೂಮಿಗೆ ಹೋಗಿ ನೋಡಿದಾಗ ರೂಮ್‌ನ ಒಳಗಡೆ ಇದ್ದ ಕಬ್ಬಿಣದ ಕಬಾಟಿನ ಬಾಗಿಲು ತೆರೆದಿದ್ದು ಅದರ ಒಳಗಡೆ ಇದ್ದ ಸೊತ್ತುಗಳನ್ನು ಜಾಲಾಡಿ ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂತು. ಬಳಿಕ ಅಡುಗೆ ಕೋಣೆಗೆ ಹೋಗಿ ನೋಡಿದಾಗ ಕಿಟಕಿಗೆ ಹಾಕಿದ್ದ ಕೊಂಡಿ ಜಖಂ ಮಾಡಿರುವುದು ಕಂಡು ಬಂದಿದ್ದಲ್ಲದೆ ಅಡುಗೆ ಕೋಣೆಯ ಬಾಗಿಲು ಕೂಡ ತೆರೆದಿರುವುದು ಕಂಡು ಬಂತು.ಮರದ ಕಬಾಟಿನ ಡ್ರಾವರಿನ ಒಳಗಡೆ ಇಟ್ಟಿದ್ದ ಬಂಗಾರದ ಸೊತ್ತುಗಳಾದ 1)ಕರಿಮಣಿ ಸರ -1(28 ಗ್ರಾಮ್ ಮೌಲ್ಯ 2, 75,000/-). 2) ಬಳೆ -2(20 ಗ್ರಾಮ್- ಮೌಲ್ಯ 1,80,000/-), 3)ಪಕಳ ಸರ-1 (16 ಗ್ರಾಮ್ ಮೌಲ್ಯ1,44,000/-), 4)ಮುತ್ತು ಸರ-1(20 ಗ್ರಾಮ್- ಮೌಲ್ಯ 1,80,000/-), 5)ಕಿವಿ ಓಲೆ -1 ಜೊತೆ(8 ಗ್ರಾಮ್ – ಮೌಲ್ಯ 90,000/-), 6) ಕಿವಿ ಓಲೆ -1 ಜೊತೆ( 10 ಗ್ರಾಮ್ – ಮೌಲ್ಯ 1,00,000/-), 7)ಕಿವಿಯ ಚಿಕ್ಕ ಓಲೆ- 1ಜೊತೆ(3 ಗ್ರಾಮ್ ಮೌಲ್ಯ 24,000/-). 8)ಸರ -1( 20 ಗ್ರಾಮ್ – ಮೌಲ್ಯ 1,80,000/-),9) ಉಂಗುರ -3 ( 6 ಗ್ರಾಮ್- ಮೌಲ್ಯ 48,000/-). 10) ಪೆಂಡೆಂಟ್ -1( 2 ಗ್ರಾಮ್ – ಮೌಲ್ಯ 18,000/-) 11)ಬ್ರಾಸ್‌ಲೈಟ್- 1( 4 ಗ್ರಾಮ್- 36,000/-) ಈ ಸೊತ್ತುಗಳನ್ನು ಯಾರೋ ಕಳ್ಳರು ಅಡುಗೆ ಕೋಣೆಯ ಕಿಟಕಿಯ ಚಿಲಕವನ್ನು ಜಖಂ ಮಾಡಿ ಕಿಟಕಿ ಮೂಲಕ ಅಡುಗೆ ಕೋಣೆಯ ಬಾಗಿಲಿನ ಚಿಲಕವನ್ನು ತೆರೆದು ಒಳ ಪ್ರವೇಶಿಸಿ ರೂಮ್‌ನ ಒಳಗಡೆ ಮರದ ಕಬಾಟಿನ ಒಳಗಡೆ ಡ್ರಾವರ್‌ನಲ್ಲಿರಿಸಿದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2025,ಕಲಂ: 331(4), 305 2023 BNS ರಂತೆ ಪ್ರಕರಣ ದಾಖಲಿಸಲಾಗಿದೆ.