ಕಾಪು: ಮಹಿಳೆಯೊಬ್ಬರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬಳಿ ಇದ್ದ ಪರ್ಸ್ ಕಳ್ಳತನವಾದ ಘಟನೆ ನಡೆದಿದೆ.
ಪರ್ಸ್ ಕಳಕೊಂಡ ಮಹಿಳೆ ಯಲಹಂಕಾ ನಿವಾಸಿ ರಾಧಿಕ ಎಂದು ತಿಳಿದು ಬಂದಿದೆ.
ಕಳವು ಆದ ಪರ್ಸ್ ನಲ್ಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಚಿನ್ನಾಭರಣಗಳು ಇತ್ತು ಎನ್ನಲಾಗಿದೆ.
ಈ ಘಟನೆ ಬಗ್ಗೆ ಮಹಿಳೆ ಕಾಪು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಾಂಶ : ಪಿರ್ಯಾದುದಾರ ಶ್ರೀಮತಿ ರಾಧಿಕಾ(66) ಯಲಹಂಕಾ ನ್ಯೂ ಟೌನ್, ಯಲಹಂಕಾ, ಬೆಂಗಳೂರು ರವರು ದಿನಾಂಕ: 22-05-2025 ರಂದು ಯಶವಂತಪುರ ರೈಲು ನಿಲ್ದಾಣದಿಂದ ಉಡುಪಿ ರೈಲು ನಿಲ್ದಾಣಕ್ಕೆ ತಮ್ಮ ಸಹೋದರ ಶ್ರೀ.ಹರಿಪ್ರಸಾದ್ ರವರೊಂದಿಗೆ ಪ್ರಯಾಣಿಸಲು ಸಂಜೆ 06-59 ಗಂಟೆಗೆ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದು ಪ್ಲಾಟ್ ಪಾರಂ ನಂ. 3ರಲ್ಲಿ 07-04 ಪಿ.ಎಂ. ಗಂಟೆಗೆ ಬಂದ ನಂ. 16595 ಪಂಚಗಂಗಾ ಎಕ್ಸ್ ಪ್ರೆಸ್ ರೈಲುಗಾಡಿಯ ಹೆಚ್.ಎ.-1 ಬೋಗಿಯನ್ನು ಹತ್ತಿ ಸೀಟ್ ನಂ. 1 ಲೋವರ್ ಬರ್ತ ನಲ್ಲಿ ಕುಳಿತಿದ್ದು, ಹರಿಪ್ರಸಾದ್ ರವರು ತನ್ನ ಎದುರುಗಡೆ ಸೀಟಿನಲ್ಲಿ ಕುಳಿತು ಊಟವನ್ನು ಮಾಡಿದ್ದು, ಪೋನಿನಲ್ಲಿ ಮದುವೆಗೆ ಹೋಗುವುದಾಗಿ ಮಾತನಾಡಿದ್ದು, ನಂತರ ಹರಿಪ್ರಸಾದ್ ರವರು ಎ-1 ಬೋಗಿಯ ಸೀಟ್ ನಂ. 45ಕ್ಕೆ ಹೋಗಿದ್ದು ರಾತ್ರಿ 09-30 ರಿಂದ 10-00 ಪಿ.ಎಂ. ಗಂಟೆಯ ಸಮಯದಲ್ಲಿ ಬತರ್ ನಂ. 1 ರಲ್ಲಿ ಚಿನ್ನದ ವಡವೆಗಳಿದ್ದ ಪರ್ಸನ್ನು ಹಸಿರು ಬಣ್ಣದ ಸ್ಪಿಂಗ್ ಬ್ಯಾಗಿನಲ್ಲಿ ಇಟ್ಟುಕೊಂಡು ಬ್ಯಾಗನ್ನು ತಮ್ಮ ತಲೆಯ ಪಕ್ಕದಲ್ಲಿ ಇಟ್ಟು ಮಲಗಿಕೊಂಡು ಪ್ರಯಾಣ ಮಾಡಿಕೊಂಡು ಹೋಗಿ ದಿನಾಂಕ:23-05-2025 ರಂದು ಬೆಳಿಗ್ಗೆ ಸುಮಾರು 04-25 ಎ.ಎಂ. ಗಂಟೆಗೆ ಎದ್ದು ತನ್ನ ಪರ್ಸನ್ನು ಚಕ್ ಮಾಡಿದಾಗ ಚಿನ್ನದ ವಡವೆಗಳಿದ್ದ ಪರ್ಸ ಕಂಡುಬರಲಿಲ್ಲ, ಹಾಗೂ ಅದರ ಜೊತೆಯಲ್ಲಿ ಎನ್ವಲಪ್ ಕವರ್ನಲ್ಲಿದ್ದ ಹಣ ಸಹ ಕಂಡುಬರಲಿಲ್ಲ ಖಾಲಿ ಕವರ್ ಗಳು ಇದ್ದವು ಆಗ ರೈಲುಗಾಡಿಯು ಮುಲ್ಕಿ ರೈಲು ನಿಲ್ದಾಣವನ್ನು ಬಿಟ್ಟು ಉಡುಪಿ ರೈಲು ನಿಲ್ದಾಣದಿಂದ 8 ಕಿ.ಮೀ ದೂರದಲ್ಲಿ ಚಲಸುತಿತ್ತು, ಕಳವಾದ ನನ್ನ ಪರ್ಸನಲ್ಲಿ, 1] ಒಂದು ಹವಳದ ಚಿನ್ನದ ನಕ್ಲೇಸ್ ತೂಕ 22 ಗ್ರಾಂ ಬೆಲೆ 1,96,000-00 ರೂಗಳು, 2] ಒಂದು ಹವಳದ ಚಿನ್ನದ 2 ಬಳೆಗಳು ತೂಕ 22 ಗ್ರಾಂ ಬೆಲೆ 2,16,000-00 ರೂಗಳು, 3] ಚಿನ್ನದ ಮುತ್ತಿನ ಹಾರ ತೂಕ 36 ಗ್ರಾಂ ಬೆಲೆ 3,50,000-00 ರೂಗಳು, 4] ಚಿನ್ನದ ಮುತ್ತಿನ 2 ಬಳೆಗಳು ತೂಕ 34 ಗ್ರಾಂ ಬೆಲೆ 3,34,000-00 ರೂಗಳು, 5] ಚಿನ್ನದ ಎರಡು ಎಳೆಯ ಮಂಗಳ ಸೂತ್ರ ತೂಕ 22 ಗ್ರಾಂ ಬೆಲೆ 2,75,000-00 ರೂಗಳು, 6] ಚಿನ್ನದ 2 ಬಳೆಗಳು ತೂಕ 30.4 ಗ್ರಾಂ ಬೆಲೆ 2,98,000-00 ರೂಗಳು ಒಟ್ಟು 170.4 ಗ್ರಾಂ ತೂಕದ ಚಿನ್ನದ ವಡವೆಗಳು ಬೆಲೆ 16,69,000-00 ರೂಗಳು ಮತ್ತು ನಗದು ಹಣ 3,000-00 ರೂಗಳು ಒಟ್ಟು 16,72,000-00 ರೂಗಳಾಗುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2025 ಕಲಂ: 305(C) BNS ರಂತೆ ಪ್ರಕರಣ ದಾಖಲಿಸಲಾಗಿದೆ.