Home Karavali Karnataka ತುಳುಕೂಟ ಉಡುಪಿಯ ಆಯೋಜನೆಯಲ್ಲಿ ತುಳು ಬದುಕನ್ನು ಪರಿಚಯಿಸುವ ಒಂದು ವಿಶೇಷ ಕಾರ್ಯಕ್ರಮ ಮದರೆಂಗಿದರಂಗ್…!!

ತುಳುಕೂಟ ಉಡುಪಿಯ ಆಯೋಜನೆಯಲ್ಲಿ ತುಳು ಬದುಕನ್ನು ಪರಿಚಯಿಸುವ ಒಂದು ವಿಶೇಷ ಕಾರ್ಯಕ್ರಮ ಮದರೆಂಗಿದರಂಗ್…!!

ಉಡುಪಿ : ತುಳುಕೂಟ ಉಡುಪಿ(ರಿ)., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ವತಿಯಿಂದ ಇದೇ ಬರುವ ಜುಲೈ 5 ತಾರೀಕಿನಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ನಡೆಯುವ ಕಾರ್ಯಕ್ರಮ ಮದರೆಂಗಿದರಂಗ್..ತುಳು ಬದುಕನ್ನು ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿಶೇಷವಾಗಿ ಒಂದನೇ ತರಗತಿಯಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಎಲೆಯಿಂದ ಪೀಂಪಿರಿ ಊದುವ ಸ್ಪರ್ಧೆ,ಹಲಸಿನ ಬೀಜದ ಸಿಪ್ಪೆ ತೆಗೆಯುವ ಸ್ಪರ್ಧೆ,ಆರನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಗೈಗೆ ಮದರಂಗಿ ಇಡುವ ಸ್ಪರ್ಧೆ, ತುಳುನಾಡಿನ ಕಾಡು ಮತ್ತು ನಾಡಿನಲ್ಲಿ ಸಿಗುವ ಹಣ್ಣುಗಳ ಗುರುತು ಹಿಡಿಯುವ ಸ್ಪರ್ಧೆ,ತೆಂಗಿನ ಗರಿಯಲ್ಲಿ ವಸ್ತುಗಳನ್ನು ತಯಾರು ಮಾಡುವ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳಿಗೆ ಅಂಗೈಗೆ ಮದರಂಗಿ ಇಡುವ ಸ್ಪರ್ಧೆ,ಕೇಶಾಲಂಕಾರ,ತಲೆಗೆ ಮುಂಡಾಸು ಕಟ್ಟುವ ಸ್ಪರ್ಧೆ,ಹೂ ಕಟ್ಟುವ ಸ್ಪರ್ಧೆ , ಹಾಗೆಯೇ ಸಾರ್ವಜನಿಕರಿಗೆ ಅಂಗೈಗೆ ಮದರಂಗಿ ಇಡುವ ಸ್ಪರ್ಧೆ,ಜಡೆಗೆ ಜಲ್ಲಿ ಬಿಡಿಸುವ ಸ್ಪರ್ಧೆ,ಬತ್ತಿ ಕಟ್ಟುವ ಸ್ಪರ್ಧೆ,ಹೂ ಜೋಡಣೆ ಸ್ಪರ್ಧೆ ನಡೆಯಲಿದೆ.. ವಿಶೇಷವಾಗಿ ಎಲ್ಲಾ ವಿಭಾಗಕ್ಕೆ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆ ನಡೆಯಲಿದೆ.ಮಕ್ಕಳಿಗೆ ತುಳು ರಸಪ್ರಶ್ನೆ ನಡೆಯಲಿದೆ.ಸ್ಪರ್ಧೆಯ ನಿಯಮಗಳು* ಮದರಂಗಿ ಹಚ್ಚುವ ಸ್ಪರ್ಧೆ ಸಾಂಪ್ರದಾಯಿಕ ವಾಗಿರುತ್ತದೆ.ಅಂಗಡಿಯಲ್ಲಿ ಸಿಗುವ ಕೋನ್ ಬಳಸುವ ಹಾಗಿಲ್ಲ.ಮದರಂಗಿ ಸೊಪ್ಪು ಅರೆದು ತರಬೇಕು.ಕಡ್ಡಿಯಲ್ಲಿ ಹಚ್ಚಬೇಕು.ಅಂಗೈಗೆ ಹಚ್ಚಲು ಜನ ಕರೆದುಕೊಂಡು ಬರಬೇಕು.ಬತ್ತಿ ಕಟ್ಟುವವರು ಹತ್ತಿ ತರಬೇಕು.ಹೂ ಕಟ್ಟುವವರು ಹೂ ತರಬೇಕು.ಸಂಘಟಕರ ತೀರ್ಮಾನವೇ ಅಂತಿಮ ವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ 9036483463 ಅಥವಾ 9449102026 ಈ ನಂಬರಿಗೆ ಕರೆ ಮಾಡಬಹುದು..ಈ ಎಲ್ಲಾ ಸ್ಪರ್ಧೆಗಳಲ್ಲಿ ತುಳುವರು,ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೇಕಾಗಿ ತುಳುಕೂಟ ಉಡುಪಿಯ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.