ಉಡುಪಿ: ಮುಂಬೈನಿಂದ ಉಡುಪಿ-ಶಿರ್ವ- ಮೂಡುಬಿದಿರೆಗಾಗಿ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಐರಾವತ ಬಸ್ಸಿನಲ್ಲಿ ಕುಳಿತಿದ್ದ ಪ್ರಯಾಣಿಕ ಸೀಟಿನಲ್ಲಿ ಕುಳಿತಲ್ಲಿಯೇ ಮೃತಪಟ್ಟ ಘಟನೆ ಮುಂಜಾನೆ ಸಂಭವಿಸಿದೆ.
ಮೃತಪಟ್ಟ ಪ್ರಯಾಣಿಕ ಕುಮಟಾ ಮೂಲದ ಸತ್ಯ ಭಂಡಾರಿ(45) ಎಂದು ತಿಳಿದು ಬಂದಿದೆ.
ಮೃತದೇಹವನ್ನು ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.