Home Crime ಬೆಳ್ತಂಗಡಿ : ಜಾತ್ರೆ ಯಲ್ಲಿ ಅನ್ಯ ಜೋಡಿ ಮಾತುಕತೆ : ಅನೈತಿಕ ಪೊಲೀಸ್ ಗಿರಿ :...

ಬೆಳ್ತಂಗಡಿ : ಜಾತ್ರೆ ಯಲ್ಲಿ ಅನ್ಯ ಜೋಡಿ ಮಾತುಕತೆ : ಅನೈತಿಕ ಪೊಲೀಸ್ ಗಿರಿ : ಪ್ರಕರಣ ದಾಖಲು…!!

ಬೆಳ್ತಂಗಡಿ : ಖಾಸಗಿ ಶಿಕ್ಷಣ ಸಂಸ್ಥೆಯ 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಅನ್ಯಧರ್ಮದ ಯುವತಿಯರೊಂದಿಗೆ ಜಾತ್ರೆಗೆ ಬಂದಿದ್ದಾನೆ ಎಂಬ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಮಾರ್ಚ್ 11ರಂದು ಸಂಜೆ ಹುಡುಗ ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಜಾತ್ರೆಗೆ ತೆರಳಿದ್ದಾಗ ವಿದ್ಯಾರ್ಥಿನಿಯ ಜೊತೆ ಮಾತನಾಡಿದ್ದ. ಆಗ ಅದನ್ನು ನೋಡಿದ, ಅಲ್ಲಿ ನೆರೆದಿದ್ದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ನಿಂದಿಸಿದ್ದಾರೆ.

ಬಳಿಕ ಹುಡುಗನನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ ತಂಡ, ಬಾಲಕನಿಂದ ಬಲವಂತವಾಗಿ ‘ನಾನೇ ತಪ್ಪು ಮಾಡಿದ್ದೇನೆ’ ಎಂದು ಹೇಳಿಕೆ ನೀಡುವ ವಿಡಿಯೋ ಚಿತ್ರೀಕರಿಸಿಕೊಂಡು ಆತನನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ದೂರಲಾಗಿದೆ.

​ಘಟನೆಯಿಂದ ತೀವ್ರ ಭಯಭೀತರಾಗಿದ್ದ ಹುಡುಗ ಈ ಬಗ್ಗೆ ಯಾರಿಗೂ ತಿಳಿಸಿರಲಿಲ್ಲ. ಮಗನ ಪರಿಸ್ಥಿತಿಯನ್ನು ಗಮನಿಸಿದ ತಂದೆ ಬುಧವಾರ (ಮಾ. 18) ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ 2023ರ ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.