ಮಲ್ಪೆ: ಉಡುಪಿ ತಾಲೂಕಿನ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಕಾರ್ಮಿಕನೊಬ್ಬ ಅನುಮಾನಾಸ್ಪದವಾಗಿ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಜಯಶೀಲ ಅಮೀನ್ (45), ಇವರಿಗೆ ಸೇರಿದ “ಶ್ರೀ ಈಶನಿಧಿ” ಬೋಟಿನಲ್ಲಿ ಕೆಲಸ ಮಾಡುತ್ತಿದ್ದ ಸನಂತನ್ ಕಿಶನ್ (35), ಪಗು ಕಿಶನ್ ಅವರ ಪುತ್ರ, ಒಡಿಶಾ ರಾಜ್ಯದ ಸುಂದರಗಢ ಜಿಲ್ಲೆಯ ಶಿಕಜೋರ ನಿವಾಸಿಯಾಗಿದ್ದು, ಕೊಡವೂರು ಗ್ರಾಮದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕಾರ್ಯ ನಿರ್ವಹಿಸುತ್ತಿದ್ದರು.
ದಿನಾಂಕ 01/04/2026 ರಂದು ಸಂಜೆ ಸುಮಾರು 5:00 ಗಂಟೆಗೆ ಬೋಟನ್ನು ನಿಲ್ಲಿಸಿದ ನಂತರ ಸನಂತನ್ ಕಿಶನ್ ಅವರು ಕಾಣೆಯಾಗಿದ್ದು, ನಂತರ ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ “ಮನುಷ್ಯ ಕಾಣೆ” ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





