ಕಾರ್ಕಳ : ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ವತಿಯಿಂದ ಪಿ ಯು ಸಿ ನಂತರದ ವಿದ್ಯಾರ್ಥಿನಿಯರಿಗಾಗಿ
ಉಚಿತ ಫ್ಯಾಷನ್ ಡಿಸೈನಿಂಗ್ ಕಾರ್ಯಾಗಾರವು ಮಾರ್ಚ್ 25 ರಿಂದ 30 ರ ವರಗೆ ಕಾರ್ಕಳ ಎಸ್ ಜೆ ಅರ್ಕಡ್ ನಲ್ಲಿರುವ
ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ನಲ್ಲಿ ನಡೆಯಲಿದೆ.
ಪ್ರತಿದಿನ ಪೂರ್ವಹ್ನ 10 ರಿಂದ ಅಪರಾಹ್ನ 4.00 ರ ವರೆಗೆ ನಡೆಯುವ ಈ ಕಾರ್ಯಾಗಾರದಲ್ಲಿ ವಿಶೇಷವಾಗಿ 17 ರಿಂದ 25 ವರ್ಷರವರೆಗಿನ ಯುವತಿಯರಿಗಾಗಿ ಹೂಪ್ ಆರ್ಟ್, ಜ್ಯುವೆಲರಿ ತಯಾರಿಕೆ, ಮೆಹಂದಿ, ಕ್ಲೇ ಆರ್ಟ್, ಸೇರಿದಂತೆ ವಿವಿಧ ಫ್ಯಾಶನ್ ಸಂಬಂದಿಸಿದ ವಿಷಯಗಳನ್ನು ಕಲಿಸಿಕೊಡಲಾಗುವುದು ಹಾಗೂ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಯುವತಿಯರು ಸ್ವಂತ ಉದ್ಯೋಗ ನಡೆಸಿ ಸ್ವಾವಲಂಬಿ ಬದುಕು ನಡೆಸಲು ಸಹಾಯವಾಗಲಿದೆ ಎಂದು ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ ಸಾಧನ ಅಶ್ರೀತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಕಾರ್ಯಾಗಾರದ ಬಗ್ಗೆ ಮಾಹಿತಿಗಾಗಿ 8147532590 /7353211991 ಅಥವಾ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಕಾರ್ಕಳ ಇಲ್ಲಿ ಸಂಪರ್ಕಿಸಬಹುದಾಗಿದೆ.





