ಉಡುಪಿ: ನಗರದ ಸಮೀಪ ವ್ಯಕ್ತಿಯೊಬ್ಬರು ಅಂಗಡಿಗೆ ಹೋಗಿ ಬುರತ್ತೇನೆಂದು ಹೋದವರು ಮನೆಗೆ ವಾಪಾಸು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಮಂಜುನಾಥ್ ಎಮ್ ಡಿ ಎಂದು ತಿಳಿಯಲಾಗಿದೆ.
ಈ ಘಟನೆ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಪಿರ್ಯಾದಿದಾರರಾದ ಅನ್ನಪೂರ್ಣ (40), ಚಂದು ಮೈದಾನ ಉಡುಪಿ ಇವರ ಗಂಡ ಮಂಜುನಾಥ ಎಮ್.ಡಿ. (45) ರವರು ದಿನಾಂಕ 11/03/2026 ರಂದು ಮಧ್ಯಾಹ್ನ:12:45 ಗಂಟೆಗೆ ಅಂಗಡಿಗೆ ಹೋಗಿ ಬುರತ್ತೇನೆಂದು ಹೋದವರು ಮನೆಗೆ ವಾಪಾಸು ಬಂದಿರುವುದಿಲ್ಲ. ಇದೇ ರೀತಿ ಹಲವಾರು ಬಾರಿ ಬಿಟ್ಟು ಹೋಗಿರುತ್ತಾರೆ. ಕಾಣೆಯಾದ ಮಂಜುನಾಥ ಎಮ್.ಡಿ. ವಾಪಾಸ್ ಬರಬಹುದು ಎನ್ನುವಾ ಉದ್ದೇಶದಿಂದ ಮತ್ತು ಸಂಬಂಧಿಕರಿಗೆ ದೂರವಾಣಿ ಕರೆಮಾಡಿ ವಿಚಾರಿಸಿ ಎಲ್ಲಾ ಕಡೆಗಳಲ್ಲಿ ಹುಡುಕಾಡಿದಲ್ಲಿ ಸಂಬಧಿಕರ ಮನೆಗೂ ಹೋಗದೇ ವಾಪಸ್ಸು ಮನೆಗೂ ಬಾರದೇ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2026 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.





