ಬೆಂಗಳೂರು: ಬೈಕ್ ಅಡ್ಡಗಟ್ಟಿ ದರೋಡೆ ಮಾಡಿದ್ದ ಗ್ಯಾಂಗ್‌ನ ಆರೋಪಿಗಳನ್ನು ಬಂಧಿಸುವಲ್ಲಿ ಬನ್ನೇರುಘಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಖಿಲ್, ಪ್ರಶಾಂತ್ ಅಲಿಯಾಸ್ ಪಿಂಕಿ, ಅರುಣ್ ಕುಮಾರ್, ಹರೀಶ್, ರಕ್ಷಿತ್ ಬಂಧಿತ ಆರೋಪಿಗಳು.
ಆರೋಪಿಗಳಿಂದ 10 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀ ಕೈಲಾಸ್ ಎಂಬಾತನನ್ನ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಗ್ಯಾಂಗ್ ದರೋಡೆ ಮಾಡಿ ಎಸ್ಕೇಪ್ ಆಗಿತ್ತು. ಘಟನೆ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೈಲಾಸ್ ಅವರು ಉಡಾನ್ ಕಂಪನಿಗೆ ಸೇರಿದ ಹಣವನ್ನ ಕಲೆಕ್ಷನ್ ಮಾಡುತ್ತಿದ್ದರು. ಕಳೆದ ಫೆ.1 ರಂದು ಹಣ ಕಲೆಕ್ಷನ್ ಮಾಡಿದ್ದರು. ಬೈಕ್‌ನಲ್ಲಿ ಬರುವಾಗ ಎರಡು ಬೈಕ್‌ಗಳಲ್ಲಿ ಗ್ಯಾಂಗ್ ಹಿಂಬಾಲಿಸಿತ್ತು. ಲಾಂಗ್‌ನಿಂದ ಹಲ್ಲೆ ನಡೆಸಿ ಹಣ, ಬೈಕ್ ರಾಬರಿ ಮಾಡಿ ಎಸ್ಕೇಪ್ ಆಗಿತ್ತು. ರಸ್ತೆಯಲ್ಲಿ ಬೈಕ್ ಬಿಟ್ಟು ಹಣ ಎಗರಿಸಿ ಪರಾರಿಯಾಗಿತ್ತು. 31,38,625 ರೂ. ಹಣವನ್ನ ರಾಬರಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದರು.
ಮೂರು ತಂಡಗಳ ರಚನೆ ಮಾಡಿ ಅರೋಪಿಗಳಿಗೆ ತಲಾಶ್ ನಡೆಸಿದ್ದರು. ಪರಿಚಿತರೇ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೈಲಾಸ್‌ಗೆ ಹಣ ನೀಡಿದ್ದ ಉಡಾನ್ ಕಂಪನಿಯ ಸಿಬ್ಬಂದಿ ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆ ರಾಬರಿ ಪ್ಲ್ಯಾನ್ ಮಾಸ್ಟರ್ ಮೈಂಡ್ ಬಂಧಿಸಲಾಯಿತು. ಉಡಾನ್ ಕಂಪನಿಯ ಸಿಬ್ಬಂದಿ ರಕ್ಷಿತ್ ಎಂಬಾತನನ್ನು ಪೊಲೀಸರು ಬಂಧಿಸಿದರು. ಕೈಲಾಸ್ ನಿತ್ಯ ಹಣ ಕಲೆಕ್ಷನ್ ಮಾಡ್ತಾನೆ ಅಂತ ರಕ್ಷಿತ್‌ಗೆ ಗೊತ್ತಿತ್ತು. ತನ್ನ ಸ್ನೇಹಿತರ ಜೊತೆಗೂಡಿ ರಾಬರಿ ಮಾಡಿ ಹಣ ಮಾಡಲು ಮುಂದಾಗಿದ್ದ. ಅದರಂತೆಯೇ ಪ್ಲ್ಯಾನ್ ಮಾಡಿ ಗ್ಯಾಂಗ್ ದರೋಡೆ ಮಾಡಿತ್ತು.
ಪ್ರಕರಣ ಸಂಬಂಧ ಒಟ್ಟು ಐವರು ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಡಿವೈಎಸ್ಪಿ ಮೋಹನ್, ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಕುಮಾರ್, ಮಂಜುನಾಥ್ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.



