ಬೆಂಗಳೂರು: ಕರ್ನಾಟಕ ಸರ್ಕಾರ ಮಹಿಳಾ ಸಬಲೀಕರಣ ಮತ್ತು ಸ್ವಯಂ ಉದ್ಯೋಗವನ್ನು ಆಗ್ರಹಿಸಿ “ಉಚಿತ ಹೊಲಿಗೆ ಯಂತ್ರ” ಯೋಜನೆಯನ್ನು ನವೀಕರಿಸಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಅರ್ಹ ಮಹಿಳೆಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಗುತ್ತದೆ.
ಇದು ತಾಂತ್ರಿಕ ತಯಾರಿಕೆಯಲ್ಲಿ ನೈಪುಣ್ಯವಿರುವ ಗ್ರಾಮೀಣ ಮಹಿಳೆಯರಿಗೆ ನಿರಂತರ ಆದಾಯದ ಅವಕಾಶ ಕಲ್ಪಿಸುವುದೇ ಮುಖ್ಯ ಉದ್ದೇಶ, ಈ ಒಂದು ಮಾಹಿತಿಯ ಬಗ್ಗೆ ಹೆಚ್ಚಿನ ವಿವರಣೆಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗೂ ಓದಿ.
2024–25ನೇ ಸಾಲಿನಲ್ಲಿ ಗ್ರಾಮೀಣ ಕೈಗಾರಿಕೆ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಕೈಗಾರಿಕಾ ವಿಭಾಗದ ಮುಖಾಂತರ ಈ ಯೋಜನೆಯನ್ನು ನವೀಕರಿಸಲಾಗಿದೆ. ಹೆಸರು ಮಾತ್ರವಲ್ಲದೇ, ಮುದ್ರಣಾತ್ಮಕ ವಿಸ್ತಾರ ಮತ್ತು ಪೈಲಟ್ ಜಿಲ್ಲೆಗಳ ವ್ಯಾಪ್ತಿಯೂ ಬದಲಾಗಿವೆ. ಚಿಕ್ಕಬಳ್ಳಾಪುರ, ಉಡುಪಿ, ಚಿಕ್ಕಮಗಳೂರು, ತುಮಕೂರಿನಲ್ಲಿ ಅರ್ಜಿ ಆಹ್ವಾನ ಮತ್ತು ವಿತರಣೆ ಪ್ರಾರಂಭವಾಗಿದೆ.
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು:
:ಅರ್ಜಿದಾರರು 18 ರಿಂದ 45 ವರ್ಷ ವಯಸ್ಸಿನವರಾಗಿರಬೇಕು.
• ಅರ್ಜಿ ಸಲ್ಲಿಸುವ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು ರೂ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.
• ಕುಟುಂಬದ ಸದಸ್ಯರು ಸರ್ಕಾರಿ ಉದ್ಯೋಗದಲ್ಲಿದ್ದರೆ ಅಂತಹ ಮಹಿಳೆಯರು ಅರ್ಜಿ ಸಲ್ಲಿಸಲು ಅರ್ಹರಲ್ಲ.
• ಭಾರತೀಯ ಪೌರತ್ವವನ್ನು ಹೊಂದಿರುವ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:
• ಆಧಾರ್ ಕಾರ್ಡ್
• ಆದಾಯ ಪ್ರಮಾಣಪತ್ರ
• ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್
• ಪಾಸ್ಪೋರ್ಟ್ ಸೈಜ್ ಫೋಟೋ
• ವಾಸಸ್ಥಳ ದೃಢೀಕರಣ ಪತ್ರ
ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು ಅಧಿಕೃತ ವೆಬ್‌ಸೈಟ್ https://pmvishwakarma.gov.in ಗೆ ಹೋಗಿ ಅದನ್ನು ನೋಂದಾಯಿಸಬೇಕು. ನೀವು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಾಗದಿದ್ದರೇ, ನೀವು ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಅದನ್ನು ಪೂರ್ಣಗೊಳಿಸಬಹುದು. ಮೇಲೆ ತಿಳಿಸಿದ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು. ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನೀವು ಸ್ವೀಕೃತಿಯನ್ನು ಪಡೆಯಬೇಕು. ಆ ರಸೀದಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?
30-06-2025ರೊಳಗೆ ಈ ಉಚಿತ ಹೊಲಿಗೆ ಯಂತ್ರ ವಿತರಣೆ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ಬಳಿಕ ಅರ್ಜಿಯನ್ನು ಸ್ವೀಕರಿಸಲಾಗುವುದಿಲ್ಲ. ಹಿಂದುಳಿದ ವರ್ಗದ ಅರ್ಹ ಮಹಿಳೆಯರು ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.