ಮೂಡುಬಿದಿರೆ : ಆರ್ಥಿಕ ಸಂಕಷ್ಟಕ್ಕೆ ವ್ಯಕ್ತಿಯೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಂಜಾನೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟುವಿನ ನೀರಲ್ಕೆಯಲ್ಲಿ ನಡೆದಿದೆ.
ಮೃತರನ್ನು ಕಲ್ಲಬೆಟ್ಟು ನೀರಲ್ಕೆಯ ನಿವಾಸಿ ಕೂಲಿ ಕಾರ್ಮಿಕ ಸಂಜಯ್ ಯಾನೆ ಮುನ್ನಾ(26) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿವರೆಗೆ ಮನೆಯಲ್ಲಿಯೇ ಇದ್ದ ಸಂಜಯ್ ಅವರು ನಂತರ ಮನೆಯಿಂದ ಹೊರ ಹೋಗಿದ್ದಾರೆನ್ನಲಾಗಿದೆ. ಬೆಳಿಗ್ಗೆ ಮನೆ ಹತ್ತಿರದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೂಲಿ ಕಾರ್ಮಿಕರಾಗಿರುವ ಸಂಜಯ್ ಅವರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



