Home Crime ಕೋಟ: ದಾರಿ ವಿವಾದ – ಅಕ್ರಮ ಗುಂಪು ಕಂಪೌಂಡ್ ಧ್ವಂಸ, 2.5 ಲಕ್ಷ ರೂ. ನಷ್ಟ…!!

ಕೋಟ: ದಾರಿ ವಿವಾದ – ಅಕ್ರಮ ಗುಂಪು ಕಂಪೌಂಡ್ ಧ್ವಂಸ, 2.5 ಲಕ್ಷ ರೂ. ನಷ್ಟ…!!

ಕೋಟ: ದಾರಿಯ ವಿಚಾರದಿಂದ ಹಳೆಯ ವೈಷಮ್ಯ ಮತ್ತೊಮ್ಮೆ ತೀವ್ರಗೊಂಡು, ಮಾರ್ಚ್ 13 ರಂದು ಬೆಳಿಗ್ಗೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗುಂಪು ಕಂಪೌಂಡ್ ಗೋಡೆಯನ್ನು ಒಡೆದು ಸುಮಾರು 2.5 ಲಕ್ಷ ರೂಪಾಯಿಗಳ ನಷ್ಟ ಉಂಟುಮಾಡಿದ ಘಟನೆ ನಡೆದಿದೆ.

ಘಟನೆಯ ಪ್ರಕಾರ, ಪಿರ್ಯಾದಿದಾರರಾದ ಪ್ರೇಮ ಪೂಜಾರ್ತಿ (64) ಮತ್ತು ನೆರೆಮನೆಯವರು ದಾರಿಯ ವಿಷಯದಲ್ಲಿ ಹಲವಾರು ದಿನಗಳಿಂದ ತಕರಾರು ನಡೆಸುತ್ತಿದ್ದರು. ಈ ಮಧ್ಯೆ, ಅವರ ಜಾಗದಲ್ಲಿ ಕಂಪೌಂಡ್ ನಿರ್ಮಾಣ ಮಾಡಿರುವುದಾಗಿ ತಿಳಿದುಬಂದಿತು.

ಈ ಸಂದರ್ಭದಲ್ಲಿ 16 ಮಂದಿ ಆರೋಪಿಗಳು – ಗಿರಿಯಮ್ಮ, ರಾಧು, ವಸಂತಿ, ಅಶೋಕ್, ರಮೇಶ್, ಶೋಭಾ, ರತ್ನಾ, ಕೃಷ್ಣ, ನವೀನ್, ಸುಶೀಲ, ಉದಯ, ಬೋಜು, ಮಹೇಶ್, ಶೀನಾ, ಗುಲಾಬಿ ಮತ್ತು ಗಿರಿಜ – ಅಕ್ರಮವಾಗಿ ಜಾಗಕ್ಕೆ ಪ್ರವೇಶಿಸಿ ಕಂಪೌಂಡ್ ಗೋಡೆಯನ್ನು ಧ್ವಂಸ ಮಾಡಿದರು. ಇವರಿಂದ “ಯಾಕೆ ಕಂಪೌಂಡ್ ಕಟ್ಟಿದ್ದೀರಿ?” ಎಂದು ಅವಾಚ್ಯ ಶಬ್ದಗಳಿಂದ ಬೆದರಿಕೆ ನೀಡಲಾಗಿದೆ.

ಇದಲ್ಲದೆ, ಆರೋಪಿಗಳು ಪಿರ್ಯಾದಿದಾರರು ಹಾಗೂ ಅವರ ಪತಿಯನ್ನು ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ಕೂಡ ದಾಖಲಾಗಿದೆ.

ಕೋಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.