Home Kundapura News ಕುಂದಾಪುರ: ಹಟ್ಟಿಯಿಂದ 2 ದನ ಕಳವು –ಅಂದಾಜು ₹14,000 ನಷ್ಟ..!!

ಕುಂದಾಪುರ: ಹಟ್ಟಿಯಿಂದ 2 ದನ ಕಳವು –ಅಂದಾಜು ₹14,000 ನಷ್ಟ..!!

ಕುಂದಾಪುರ: ಅಂಪಾರು ಗ್ರಾಮದ ಕೆ. ಕೇಶವ ಕಿಣಿ ಅವರ ಹಟ್ಟಿಯಿಂದ 10 ವರ್ಷದ ಕಂದು ಹೆಣ್ಣು ದನ ಮತ್ತು 4 ವರ್ಷದ ಕಪ್ಪು ಗಂಡು ಕರು ಕಳ್ಳತನಗೊಂಡಿದೆ

ಕೆ. ಕೇಶವ ಕಿಣಿ (64) ಅವರು ಹಾಲಿನ ಉಪಯೋಗಕ್ಕಾಗಿ ಹಟ್ಟಿಯಲ್ಲಿ 4 ದನಗಳನ್ನು ಸಾಕುತ್ತಿದ್ದರು  ವೇಳೆ, 13-03-2026 ರ ರಾತ್ರಿ 11:30 ಗಂಟೆಗೆ ಹಟ್ಟಿಯನ್ನು ಪರಿಶೀಲಿಸಿದಾಗ ಎಲ್ಲಾ ದನಗಳು ಸುರಕ್ಷಿತವಾಗಿದ್ದವು.

ಬೆಳಿಗ್ಗೆ 14-03-2026 ರ ಬೆಳಿಗ್ಗೆ 4:00 ಗಂಟೆಗೆ ಹಟ್ಟಿಯ ಬಾಗಿಲನ್ನು ತೆರೆದಾಗ 10 ವರ್ಷದ ಕಂದು ಹೆಣ್ಣು ದನ ಮತ್ತು 4 ವರ್ಷದ ಕಪ್ಪು ಗಂಡು ಕರು ಕಾಣದೇ ಹೋಗಿರುವುದು ಗಮನಕ್ಕೆ ಬಂದಿದೆ.

ಕಳುವಾದ ದನಗಳ ಒಟ್ಟು ಮೌಲ್ಯ ₹14,000 ಆಗಿದೆ. ಈ ಘಟನೆ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.