Home Crime ಉಡುಪಿ : ರಸ್ತೆ ಬದಿಯ ಕಾಂಪೌಂಡ್‌ಗೆ ಸ್ಕೂಟರ್ ಢಿಕ್ಕಿ : ತಾಯಿ ಮೃತ್ಯು : ಮಗ...

ಉಡುಪಿ : ರಸ್ತೆ ಬದಿಯ ಕಾಂಪೌಂಡ್‌ಗೆ ಸ್ಕೂಟರ್ ಢಿಕ್ಕಿ : ತಾಯಿ ಮೃತ್ಯು : ಮಗ ಆಸ್ಪತ್ರೆಗೆ ದಾಖಲು..!

ಉಡುಪಿ: ಸ್ಕೂಟರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಂಪೌಂಡಿಗೆ ಢಿಕ್ಕಿ ಹೊಡೆದ ಪರಿಣಾಮ ಸಹಸವಾರೆ ತಾಯಿ ಮೃತಪಟ್ಟು ಸವಾರ ಮಗ ಗಾಯಗೊಂಡ ಘಟನೆ ಇಂದು ಸಂಜೆ ನಿಟ್ಟೂರು ಸಮೀಪ ನಡೆದಿದೆ.

ಮೃತರನ್ನು ಉಡುಪಿ ಇಂಟಕ್ ಜಿಲ್ಲಾ ಕಾರ್ಯದರ್ಶಿ ಕಟಪಾಡಿ ಮೂಲದ ಹೆಲನ್ ಸೋನ್ಸ್ (50) ಎಂದು ಗುರುತಿಸಲಾಗಿದೆ. ಇವರ ಮಗ ಸವಾರ ಶರ್ವಿನ್ (20 ) ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಯಿ ಮಗ ಹೋಗುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ನಿಟ್ಟೂರು ಬಬ್ಬು ಸ್ವಾಮಿ ದೈವಸ್ಥಾನದ ಕಾಂಪೌಂಡ್ ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಸ್ಕೂಟರ್ ಸಹ ಸವಾರೆ ಹೆಲೆನ್ ಸೋನ್ಸ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.