ಮಾರ್ಚ್ 6:ದೇಶಿ ಗೋವಿನ ಕುರಿತಾಗಿ ಜಾಗೃತಿ ಮೂಡಿಸಿ, ಅವುಗಳ ಪ್ರಾಮುಖ್ಯತೆ ತಿಳಿಸುವ ನಿಟ್ಟಿನಲ್ಲಿ ಬಂಟ್ವಾಳದ ಪುದು ಗ್ರಾಮದಲ್ಲಿ ಇರುವ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ (ರಿ). ವತಿಯಿಂದ ಮಾರ್ಚ್ 5 ರಂದು ಗೋನಂದಿ ಪರಿವಾರ ರಥಯಾತ್ರೆ ಉದ್ಘಾಟನೆ ಕಾರ್ಯಕ್ರಮವು ಅಡ್ಯಾರ್ ವೀರಾಂಜನೇಯ ದೇವಸ್ಥಾನದ ಸನ್ನಿಧಾನದಲ್ಲಿ ನಡೆಯಿತು.
ಅಡ್ಯಾರ್ ಕಟ್ಟೆಯಿಂದ ರಥದ ಪುರ ಪ್ರವೇಶವನ್ನು,ಊರ ಪರವೂರ ಗಣ್ಯರು,ವೀರಾಂಜನೇಯ ದೇವಸ್ಥಾನದ ಪದಾಧಿಕಾರಿಗಳು,ಗ್ರಾಮಸ್ತರು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ, ದೇವಸ್ಥಾನದಲ್ಲಿ ಪೂಜೆ ಮುಗಿಸಿ ಸಭಾ ಕಾರ್ಯಕ್ರಮ ಜರುಗಿತು.
ವಜ್ರದೇಹಿ ಮಠ ಶ್ರೀ ಶ್ರೀ ರಾಜಶೇಖರಾನಂದ ಶ್ರೀಪಾದರು ಕಾರ್ಯಕ್ರಮ ಉದ್ಘಾಟನೆ ಮಾಡಿ, ಆಶೀರ್ವಚನ ನೀಡಿದರು. ಗೋವು ಭಾರತದ ರಾಷ್ಟ್ರೀಯ ಪ್ರಾಣಿ ಆಗಬೇಕು. ಅದು ಆಗಬೇಕಾದರೆ ಪ್ರತಿಯೊಬ್ಬ ಹಿಂದೂವಿನ ಮನದಲ್ಲಿ ಗೋವಿನ ಬಗೆಗೆ ಶ್ರದ್ಧೆ ಜಾಗೃತಿ ಆಗಬೇಕು. ಗೋ ಕಥಾ ಪಾರಾಯಣ ಕಲಿಯುಗದಲ್ಲಿ ಮನುಷ್ಯನ ಕರ್ಮವನ್ನು ಕಳೆಯುವ ಸುಲಭ ಮಾರ್ಗ, ಗೊಸೇವೆ ದೇವರ ಸೇವೆ ಎಂದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ ರಾಧಾ ಸುರಭಿ ಗೋಮಂದಿರದ ಸಂಸ್ಥಾಪಕರಾದ ಭಕ್ತಿ ಭೂಷಣ್ ದಾಸ್ ಜಿ ಅವರು ಗೋವನ್ನು ಸಾಕಲು ಕಷ್ಟ ಆಗುವವರು ಗವ್ಯ ಉತ್ಪನ್ನ ಬಳಸುವ ಮೂಲಕ ಗೋ ಪಾಲಕರಿಗೆ ಮತ್ತು ಗೋ ಮಂದಿರಗಳಿಗೆ ಜೊತೆಯಾಗಿ ನಿಲ್ಲಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಗಳಲ್ಲಿ ಗೋಸೇವಾ ಗತಿವಿಧಿಯ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರಾಗಿರುವ ಪ್ರವೀಣ ಸರಳಾಯ ಅವರು, ಇದು ಭಕ್ತಿ ಪಂಥದ ಮೂಲಕ ಸಮಾಜ ಹಾಗೂ ರಾಷ್ಟ್ರ ಜಾಗೃತಿಯ ನಿರಂತರ ಕಾರ್ಯದ ಭಾಗ, ಗೋವಿನ ಬಗೆಗಿನ ಜಾಗೃತಿಯ ಜೊತೆಗೆ ನೆಲ ಜಲ ವನ ಸಂಪತ್ತುಗಳ ಸಂವರ್ಧನೆ ನಡೆಯುವಂತಾಗಬೇಕು
,ಉತ್ತರ ಭಾರತದಲ್ಲಿ ಗೋ/ಭಾಗವತ ಕಥಾ ಸಪ್ತಾಹ ಕಾರ್ಯಕ್ರಮ ಹೆಚ್ಚಾಗಿ ನಡೆಯುತಿದ್ದು ಅದರ ಜಾಗೃತಿ ನಮ್ಮ ಕರ್ನಾಟಕದಲ್ಲಿ ಆಗಬೇಕು ಅನ್ನೋದು ನಮ್ಮ ತಂಡದ ಉದ್ದೇಶ ಎಂದರು.
ಗೋನಂದೀ ಪರಿವಾರ ರಥಯಾತ್ರೆಯ ಉಪಾಧ್ಯಕ್ಷರಾಗಿರುವ, ಶ್ರೀ ರಾಜೇಶ್ ನಾಥ್ ಅವ್ ಗಡ್ ಯೋಗಿ ಅವರು ಗೋವು ಉಳಿದರೆ ನಾವು, ನಮ್ಮಿಂದ ಗೋವಿನ ರಕ್ಷಣೆ ಜೊತೆ ಭೂ ಸುಪೋಷಣ ಕೆಲಸವಾಗಬೇಕು ಎಂದು ಹೇಳಿದರು.
ರಾಜ್ಯ ತಂಡದ ಪರಿಚಯದ ಜೊತೆ ಗೌರವಿಸುವ ಕಾರ್ಯಕ್ರಮವನ್ನು, ಗೋನಂದಿ ಪರಿವಾರ ರಥಯಾತ್ರೆ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಮಿತಾ ಸೂರ್ಯವಂಶಿ ನೆರವೇಸಿದರು.
ಪ್ರಾರ್ಥನೆನ್ನು ವೃಂದಾವನ ದಿಂದ ಬಂದಿರುವ ತಂಡದ ಸದಸ್ಯರು ನೆರವೇರಿಸದರು.
ಸ್ವಾಗತವನ್ನು ವೀರಾಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷರಾದ ರಮೇಶ್ ತುಂಬೆ ನೆರವೇಸಿದರು. ಕಾರ್ಯಕ್ರಮ ನಿರೂಪಣೆ ಪುರುಷೋತ್ತಮ್ ಭಂಡಾರಿ ಅವರು ನಡೆಸಿಕೊಟ್ಟರು . ವೇದಿಕೆಯಲ್ಲಿ ಗೋ ನಂದಿ ಪರಿವಾರ ಕಾರ್ಯದಕ್ಷರಾದ ನಿವೇದಿತಾ ಶೆಟ್ಟಿ ಮತ್ತು ಸ್ಥಳೀಯ ಮಾತೃ ಮಂಡಳಿ ಅಧ್ಯಕ್ಷರು ಆಗಿರುವ ಮೋಹಿನಿ ಅವರು ಉಪಸ್ಥಿತರಿದ್ದರು. ರೇಷ್ಮಾ ಎಸ್ ಶೆಟ್ಟಿ ಅವರು ಧನ್ಯವಾದ ಸಮರ್ಪಿಸಿದರು.



