Home Crime ಮಣಿಪಾಲ : ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣು….!!

ಮಣಿಪಾಲ : ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣು….!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ವ್ಯಕ್ತಿಯೊಬ್ಬರು ಸಿಮೆಂಟ್‌ ಸೀಟಿನ ಕಬ್ಬಿಣದ ರಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಶರಣಪ್ಪ ತಂಡಿಗೇರಿ ಎಂದು ತಿಳಿದು ಬಂದಿದೆ.

ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದಿದಾರರಾದ ದ್ಯಾಮವ್ವ (34), ಬಡಗುಬೆಟ್ಟು ಗ್ರಾಮ ಉಡುಪಿ ಇವರ ಗಂಡ ಶರಣಪ್ಪ ತಂಡಿಗೇರಿ (44) ರವರು ನಿರ್ಮನ ಪ್ಲಾಟ್‌ ಸೆಕ್ಯೂರಿಟಿ ರೂಮ್‌ ನಲ್ಲಿ ವಾಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುತಿದ್ದು ಜೀವನದಲ್ಲಿ ಜಿಗುಪ್ಸೆಗೊಂಡು ಅದೇ ಕಾರಣದಿಂದಲೋ ಅಥವಾ ಬೇರೇ ಯಾವುದೋ ಕಾರಣದಿಂದ ದಿನಾಂಕ 22/06/2026 ರಂದು ರಾತ್ರಿ 9:00 ಯಿಂದ 11:00 ಗಂಟೆಯ ನಡುವೆ ವಾಸ ಮಾಡಿಕೊಂಡಿದ್ದ ಮನೆಯ ಕೆಳಗೆ ಹಾಕಲಾದ ಸಿಮೆಂಟ್‌ ಸೀಟಿನ ಕಬ್ಬಿಣದ ರಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 34/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.