Home Kundapura News ಗಂಗೊಳ್ಳಿ: ಕುಸಿದು ಬಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು…!

ಗಂಗೊಳ್ಳಿ: ಕುಸಿದು ಬಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು…!

ಗಂಗೊಳ್ಳಿ, ಮಾ.13: ಹರ್ಕೂರು ಕಟ್ಟಿನಮಕ್ಕಿ ಪ್ರದೇಶದಲ್ಲಿ ಯುವಕನೊಬ್ಬ ಹಠಾತ್ ಕುಸಿದು ಬಿದ್ದು ಬಳಿಕ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಶಶಿಧರ ದೇವಾಡಿಗ (25) ಎಂದು ಗುರುತಿಸಲಾಗಿದೆ. ಇವರು ಬಿಬಿಎ ವ್ಯಾಸಂಗ ಮುಗಿಸಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ವರ್ಕ್ ಫ್ರಮ್ ಹೋಮ್ ಮೂಲಕ ಊರಲ್ಲಿಯೇ ಇದ್ದರು.

ಮಾ.11ರಂದು ಸಂಜೆ ಮನೆಯ ಸಿಟೌಟ್‌ನಲ್ಲಿ ಕುಳಿತಿದ್ದ ಶಶಿಧರ ಅವರು ಮನೆಯ ಹಿಂದಿನ ಸ್ನಾನಗೃಹಕ್ಕೆ ತೆರಳುವಾಗ ಹಠಾತ್ ಕುಸಿದು ಬಿದ್ದಿದ್ದು, ಎದೆನೋವಿನಿಂದ ನರಳಾಡಿದರು ಎನ್ನಲಾಗಿದೆ. ಬಳಿಕ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮೃತರ ತಂದೆ ಸದಾಶಿವ ಕೆ. ಉಳ್ಳೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.