Home Latest ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಉಗ್ರ ವರ್ತನೆ : ಯುವಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು…!

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಉಗ್ರ ವರ್ತನೆ : ಯುವಕ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು…!

ಉಡುಪಿ, ಮಾ. 13; ನಗರದ ಸಾರ್ವಜನಿಕ ಸ್ಥಳದಲ್ಲಿ ಉಗ್ರ ವರ್ತನೆಯಿಂದ ಭಯದ ವಾತಾವರಣ ಸೃಷ್ಟಿಸಿದ ಅಪರಿಚಿತ ಯುವಕನನ್ನು ಸಮಾಜಸೇವಕ ನಿತ್ಯಾನಂದ‌ ಒಳಕಾಡುವರು ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಬುಧವಾರ ನಡೆದಿದೆ.

ಮಾನಸಿಕ ವ್ಯಾಧಿಗೆ ತುತ್ತಾಗಿರವ ಯುವಕನಿಗೆ, ಮನೋರೋಗ ವಿಭಾಗದಲ್ಲಿ ಚಿಕಿತ್ಸೆ ನಡೆಯುತ್ತಿದೆ. ದಾಖಲು ಪ್ರಕ್ರಿಯೆ ನಡೆಸುವಾಗ ಯುವಕ ಹೆಸರು ಗೌರೀಶ(30ವ) ತಂದೆ‌ ಓಂಕಾರೇಶಪ್ಪ, ಶಿವಮೊಗ್ಗದ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ವಾರಸುದಾರರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.