ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಸಮೀಪ ಯುವಕನೋರ್ವ ಮಾದಕ ವಸ್ತು ಸೇವನೆ ಮಾಡಿದ್ದಾನೆ ಎಂಬ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ನಿಶಾಂತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಬಜಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಬಜಪೆ ಪೊಲೀಸ್ ಠಾಣಾ ಪಿ.ಎಸ್.ಐ ಅಶೋಕ್ ರವರು 11-03-2026 ರಂದು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಸಂಜೆ ಸಮಯ ಸುಮಾರು 17-00 ಗಂಟೆಗೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೊರ್ಕೋಡಿಯ ಕಾರ್ಗಿಲ್ ಗುಡ್ಡೆ ಬಳಿ ತಲುಪಿದಾಗ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ವಾಹನವನ್ನು ನಿಲ್ಲಿಸಿ ಆತನ ಬಳಿ ಹೋಗಿ ವಿಚಾರಿಸಿದಾಗ ಆತನು ಸಮರ್ಪಕವಾಗಿ ಉತ್ತರಿಸದೆ ಇದ್ದು, ಆತನನ್ನು ಕೂಲಂಕುಷವಾಗಿ ವಿಚಾರಿಸಿದಾಗ ಆತನು ಮಾದಕ ವಸ್ತು ಸೇವನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಆತನ ಹೆಸರು ನಿಶಾಂತ್ ಶೆಟ್ಟಿ (35) ತಂದೆ – ಬಾಲಕೃಷ್ಣ ಎಂಬುವುದಾಗಿ ತಿಳಿಸಿರುತ್ತಾನೆ. ಆತನನ್ನು ವಶಕ್ಕೆ ಪಡೆದು ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ಪರೀಕ್ಷಿಸಿ ವೈದ್ಯಕೀಯ ದೃಡೀಕೃತ ವರದಿ ನೀಡುವರೇ ಕೋರಿಕೆ ಪತ್ರದೊಂದಿಗೆ ಮಂಗಳೂರು ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿಯವರಲ್ಲಿ ಹಾಜರುಪಡಿಸಿ ಪರೀಕ್ಷಿಸಿದಲ್ಲಿ ನಿಶಾಂತ್ ಶೆಟ್ಟಿ (35) ಎಂಬಾತನು Tetrahydracannabinoid (Marijuana) ಎಂಬ ಮಾದಕ ವಸ್ತು ಸೇವನೆ ಮಾಡಿರುವುದಾಗಿ ವರದಿಯನ್ನು ನೀಡಿರುತ್ತಾರೆ.ಆದ್ದುದರಿಂದ ಆರೋಪಿ ನಿಶಾಂತ್ ಶೆಟ್ಟಿ (35) ಎಂಬವನು ಸಾರ್ವಜನಿಕ ಸ್ಥಳದಲ್ಲಿ Tetrahydracannabinoid (Marijuana) ಎಂಬ ಮಾದಕ ವಸ್ತುವನ್ನು ಕಾನೂನು ಬಾಹಿರವಾಗಿ ಸೇವನೆ ಮಾಡಿ ಅಪರಾಧ ಎಸಗಿದ್ದು ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿರುತ್ತಾರೆ ಎಂಬಿತ್ಯಾದಿಯಾಗಿದೆ.



