Home Crime ಉಡುಪಿ : ಯುವತಿಯಿಂದ 14 ಲಕ್ಷ ರೂ ವಂಚನೆ : ಪ್ರಕರಣ ದಾಖಲು…!!

ಉಡುಪಿ : ಯುವತಿಯಿಂದ 14 ಲಕ್ಷ ರೂ ವಂಚನೆ : ಪ್ರಕರಣ ದಾಖಲು…!!

ಉಡುಪಿ: ಪರಿಚಯ ಮತ್ತು ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ಯುವತಿಯಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಮಾರ್ಪಳ್ಳಿ, ಉಡುಪಿ ನಿವಾಸಿ ಮಹಿಮಾ (22) ಅವರು ನೀಡಿದ ದೂರಿನ ಪ್ರಕಾರ, ಶರತ್‌ ಎಂಬಾತನು ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಅವರಿಂದ ಹಂತ ಹಂತವಾಗಿ ಹಣವನ್ನು ಪಡೆಯುತ್ತಿದ್ದನು. ಕೆಲವೊಮ್ಮೆ ₹500, ₹1000, ₹2000 ಹೀಗೆ ಹಣ ಪಡೆದು ಬಳಿಕ ಮರಳಿ ನೀಡದೇ ತಪ್ಪಿಸಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೇ ರೀತಿ ಫೆಬ್ರವರಿ 2026ರಲ್ಲಿ ಶರತ್‌ ದೂರವಾಣಿ ಮೂಲಕ ಮಹಿಮಾ ಅವರಿಗೆ ಕರೆ ಮಾಡಿ ₹15 ಲಕ್ಷ ಹಣ ಬೇಕೆಂದು ಕೇಳಿದ್ದಾನೆ. ಕಾರಣ ಕೇಳಿದಾಗ ತನ್ನ ತಂದೆಯ ಆರೋಗ್ಯ ಗಂಭೀರವಾಗಿದೆ ಎಂದು ಹೇಳಿದ್ದಾನೆ.

ಮಹಿಮಾ ಅವರು ಅಷ್ಟು ಹಣ ಇಲ್ಲವೆಂದು ತಿಳಿಸಿದಾಗ, ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು, ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಬೆದರಿಕೆಯಿಂದ ಭಯಗೊಂಡ ಮಹಿಮಾ ಅವರು ಒತ್ತಾಯಪೂರ್ವಕವಾಗಿ ಆರೋಪಿತನಿಗೆ ಒಟ್ಟು ₹14 ಲಕ್ಷ ಹಣ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.