Home Latest ಉಡುಪಿ : ಸ್ನಾನಗೃಹದಲ್ಲಿ ಬಿದ್ದು ಹೊಟೇಲ್ ಸಿಬ್ಬಂದಿ ಮೃತ್ಯು..!

ಉಡುಪಿ : ಸ್ನಾನಗೃಹದಲ್ಲಿ ಬಿದ್ದು ಹೊಟೇಲ್ ಸಿಬ್ಬಂದಿ ಮೃತ್ಯು..!

ಮಣಿಪಾಲ: ಶಿವಳ್ಳಿ ಗ್ರಾಮದ ಖಾಸಗಿ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಿಬ್ಬಂದಿಯೋರ್ವ ತಂಗುವ ಕೊಠಡಿಯ ಸ್ನಾನ ಗೃಹದಲ್ಲಿ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

 

ಮೃತ ವ್ಯಕ್ತಿ ಕಾರ್ಕಳ ಮಾಳ ಗ್ರಾಮದ ವಿಜಯ ಎಸ್. (48) ಎಂದು ತಿಳಿದು ಬಂದಿದೆ.

 

ಶುಕ್ರವಾರ ಬೆಳಗ್ಗೆ ಹೊಟೇಲ್‌ನ ಸಿಬ್ಬಂದಿ, ತಂಗುವ ಕೊಠಡಿಯ ಸ್ನಾನದ ಕೋಣೆಯಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ.

 

ಹೊಟೇಲಿನ ಇತರ ಸಿಬ್ಬಂದಿ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ವಿಜಯ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

 

ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.