ಕೊಲ್ಲೂರು: ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕರೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ನಿವೃತ್ತ ಶಿಕ್ಷಕ ಸರ್ವೋತ್ತಮ ಎಂದು ತಿಳಿದು ಬಂದಿದೆ.
ಘಟನೆ ವಿವರ : ಪಿರ್ಯಾದಿದಾರರಾದ ಕಿರಣ್ ಕುಮಾರ್ (44) ಕುಕ್ಕೆಹಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಮಾವ ಸರ್ವೋತ್ತಮ (79) ಇವರು ನಿವೃತ್ತ ಶಿಕ್ಷರಾಗಿದ್ದು, ಇವರು ದಿನಾಂಕ 16/06/2025 ರಂದು ಬೆಳಿಗ್ಗೆ ಸುಮಾರು 9:30 ಗಂಟೆಗೆ, ಮನೆಯಲ್ಲಿ ತಿಳಿಸದೇ ಮನೆ ಬಿಟ್ಟು ಹೋಗಿದ್ದು, ಪಿರ್ಯಾದಿದಾರರು ಹುಡುಕುವ ಸಮಯದಲ್ಲಿ ಕುಂದಾಪುರ ತಾಲೂಕಿನ ವಂಡ್ಸೆ ಎಂಬಲ್ಲಿ ಇರುವ ಮಾಹಿತಿ ತಿಳಿದು ಮಧ್ಯಾಹ್ನ ಸುಮಾರು 2:30 ಗಂಟೆಗೆ ವಂಡ್ಸೆಗೆ ಬಂದಲ್ಲಿ ಅವರಿಗೆ ಸೇರಿದ ಚಪ್ಪಲಿ, ವಾಚ್, ಬಸ್ ಟಿಕೆಟ್, ಹಾಗೂ ಮೊಬೈಲ್ ವಂಡ್ಸೆ ಸೇತುವೆಯ ಬಳಿ ಸಿಕ್ಕಿರುತ್ತದೆ. ಸರ್ವೋತ್ತಮ ಹೆಗ್ಡೆ ರವರು ಈ ಹಿಂದೆ ವಂಡ್ಸೆ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದು, ಅವರು ವಂಡ್ಸೆಯ ಚಕ್ರಾ ಹೊಳೆಗೆ ಹಾರಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿಕೊಂಡು ಹೋಗಿ ನಾಪತ್ತೆ ಯಾಗಿರಬಹುದು ಇಲ್ಲವೇ ಅವರಿಗೆ ಸೇರಿದ ಈ ಸ್ವತ್ತುಗಳನ್ನು ಇಲ್ಲಿಯೇ ಬಿಟ್ಟು ಕಾಣೆಯಾಗಿರಬಹುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2025 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.