Home Crime ಕಾರ್ಕಳ : ಅಕ್ರಮ ಗಣಿಗಾರಿಕೆ : ಪೊಲೀಸರಿಂದ ದಾಳಿ…!!

ಕಾರ್ಕಳ : ಅಕ್ರಮ ಗಣಿಗಾರಿಕೆ : ಪೊಲೀಸರಿಂದ ದಾಳಿ…!!

ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಹತ್ತಿರ ಕಲ್ಲುಕೋರೆ ಪಾದೆಯೊಂದರಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.

ಕಾರ್ಕಳ ಪೊಲೀಸರು ದಾಳಿ ನಡೆಸಿ,‌ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದು ಮುರಳೀಧರ ನಾಯ್ಕ್‌, ಪೊಲೀಸ್‌ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ ಇವರು ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಜಾರ್ಕಳ ಎಂಬಲ್ಲಿರುವ ಸರ್ವೇ ನಂಬ್ರ 181/1 ರಲ್ಲಿರುವ ಕಲ್ಲುಕೋರೆ ಪಾದೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಸುತ್ತಿರುವವರ ಬಗ್ಗೆ ತಿಳಿದ ಮಾಹಿತಿಯಂತೆ ದಿನಾಂಕ: 18.10.2025 ರಂದು 09.30 ಗಂಟೆಗೆ ಠಾಣಾ ಸಿಬ್ಬಂದಿಯವರೊಂದಿಗೆ ಸರಕಾರಿ ಸ್ಥಳದಲ್ಲಿರುವ ಕಲ್ಲು ಕೋರೆ ಪ್ರದೇಶಕ್ಕೆ ದಾಳಿ ನಡೆಸಿದ ಸಮಯ ಕಲ್ಲು ಕೋರೆ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವವರು ಮತ್ತು ಇತರರು ಇದ್ದು, ಸಮವಸ್ತ್ರದಲ್ಲಿದ್ದ ಸಿಬ್ಬಂದಿಯವರನ್ನು ನೋಡಿ ಓಡಿ ಹೋಗಿದ್ದು, ಸದ್ರಿ ಸ್ಥಳವನ್ನು ಪರಿಶೀಲಿಸಿದಾಗ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಸದ್ರಿ ಪ್ರದೇಶದಲ್ಲಿ ಸುರೇಂದ್ರ ಪೂಜಾರಿ ಹಾಗೂ KA 20 AB 2127ನೇ ನಂಬ್ರದ 407 ಟೆಂಪೋ ಚಾಲಕ ಸೇರಿಕೊಂಡು ಯಾವುದೇ ಪರವಾನಿಗೆಯನ್ನು ಹೊಂದದೆ ಸ್ವಂತ ಲಾಭಕ್ಕಾಗಿ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿ KA 20 AB 2127ನೇ ನಂಬ್ರದ 407 ಟೆಂಪೋದಲ್ಲಿ ಕಳವು ಮಾಡಲು ಪ್ರಯತ್ನಿಸಿದ ಬಗ್ಗೆ ಕಲ್ಲುಕೋರೆ ನಡೆಸುತ್ತಿದ್ದ ಸುರೇಂದ್ರ ಪೂಜಾರಿ, KA20AB2127ನೇ ನಂಬ್ರದ 407 ಟೆಂಪೋ ಚಾಲಕ ರಂಜಿತ್‌ ಎಂಬವರ ವಿರುದ್ದ ಕಾನೂನು ಕ್ರಮಕ್ಕಾಗಿ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 139/2025 ಕಲಂ 303(2),112(1) BNSರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.