ಉಡುಪಿ : ರಾಧಾಕೃಷ್ಣ ನೃತ್ಯನಿಕೇತನ (ರಿ.) ಉಡುಪಿ ಪ್ರಸ್ತುತ ಪಡಿಸುವ ನೃತ್ಯಾರ್ಪಣ ಭರತನಾಟ್ಯ ಕಾರ್ಯಕ್ರಮದಲ್ಲಿ ಕುಮಾರಿ ಅದಿತಿ ಜಿ. ನಾಯಕ್ (ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ ರ ಶಿಷ್ಯ) ನೃತ್ಯ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 28-08-2025 ಗುರುವಾರ, ಸಂಜೆ 5.15ಕ್ಕೆ ಉಡುಪಿಯ ಐವೈಸಿ ಯಕ್ಷಗಾನ ಕಲಾ ರಂಗ ಸಭಾಂಗಣದಲ್ಲಿ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಪತ್ರಕರ್ತರು ಹಾಗೂ ಉಡುಪಿ ಜಿಲ್ಲೆಯ ಸೌಟ್ ಆಯುಕ್ತ ರಾದ ಜನಾರ್ದನ್ ಕೊಡವೂರು, ಅತಿಥಿಗಲಾಗಿ ಸೌರಭ ಕಲಾ ಪರಿಷತ್ (ರಿ.) ಮಂಗಳೂರು ನಿರ್ದೇಶಕಿ ಡಾ| ಶ್ರೀವಿದ್ಯಾ ಆಗಮಿಸಲಿದ್ದಾರೆ. ಎಂದು ನೃತ್ಯ ನಿರ್ದೇಶಕಿ ಶ್ರೀಮತಿ ವೀಣಾ ಎಂ. ಸಾಮಗ ಹಾಗು ಆಯೋಜಕರಾದ ಎಚ್. ಗಣೇಶ್ ನಾಯಕ್ ಮತ್ತು ಲಕ್ಷ್ಮೀ ಜಿ. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಾರಿ ಅದಿತಿ ಜಿ. ನಾಯಕ್ ನೃತ್ಯಾರ್ಪಣದ ಹಿಮ್ಮೇಳದಲ್ಲಿ ನಟುವಾಂಗ, ಹಾಡುಗಾರಿಕೆ. ನೃತ್ಯ ನಿರ್ದೇಶನದಲ್ಲಿ ವಿದುಷಿ ಶ್ರೀಮತಿ ವೀಣಾ ಎಂ. ಸಾಮಗ, ಮೃದಂಗ ವಿದ್ವಾನ್ ಮನೋಹರ್ ರಾವ್ ಮಂಗಳೂರು, ವಯೋಲಿನ್ ವಿದ್ವಾನ್ ಶ್ರೀಧರ ಆಚಾರ್ಯ, ಉಡು ಪಿ, ಕೊಳಲು : ಡಾ. ಬಾಲಕೃಷ್ಣ ಮಣಿಪಾಲ, ವರ್ಣಾಲಂಕಾರ ರಮೇಶ್, ಛಾಯಾ ಗ್ರಹಣ / ವಿಡಿಯೋ ಅನಿರುದ್ ಪೈ ಮಣಿಪಾಲ ಸಹಕರಿಸಲಿದ್ದಾರೆ.

