Home Crime ಕುಂದಾಪುರ : ಯುವಕ ನಾಪತ್ತೆ : ಪ್ರಕರಣ ದಾಖಲು..!!

ಕುಂದಾಪುರ : ಯುವಕ ನಾಪತ್ತೆ : ಪ್ರಕರಣ ದಾಖಲು..!!

ಕುಂದಾಪುರ: ಹೆಮ್ಮಾಡಿ ಗ್ರಾಮದ ಸಾಹಿಲ್ (27) ಎಂಬುವವರು ಜೂ. 8 ರಿಂದ ನಾಪತ್ತೆಯಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕುಂದಾಪುರ ಫುಡ್ ಮಾರ್ಕ್ ಎಂಬ ಹೋಟೇಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದು ಜೂ. 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಹೋದವರು ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.