Home Crime ಉಳ್ಳಾಲ : ಕರೆಂಟ್ ಶಾಕ್ ಹೊಡೆದು ಯುವಕ ಸಾವು…!!

ಉಳ್ಳಾಲ : ಕರೆಂಟ್ ಶಾಕ್ ಹೊಡೆದು ಯುವಕ ಸಾವು…!!

ಉಳ್ಳಾಲ : ಹೊಸ ಬಟ್ಟೆ ಅಂಗಡಿಯ ಕಾರ್ಯದಲ್ಲಿ ತೊಡಗಿದ್ದ ಯುವಕನೊಬ್ಬ ಅದೇ ಮಳಿಗೆಯಲ್ಲಿ ಕರೆಂಟ್ ಶಾಕ್ ಹೊಡೆದು ಸಾವನಪ್ಪಿದ ದಾರುಣ ಘಟನೆ ತೊಕ್ಕೊಟ್ಟಿನಲ್ಲಿ ನಡೆದಿದೆ.

ಮೃತರನ್ನು ಮಂಗಳೂರು ಪಾಂಡೇಶ್ವರದಲ್ಲಿ ವಾಸವಾಗಿರುವ ಸಲ್ಮಾನ್ ಫಾರಿಶ್(20) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟಿನ ಸ್ಮಾರ್ಟ್ ಸಿಟಿ ವಾಣಿಜ್ಯ ಮಳಿಗೆಯಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ ಝೀರೋ ವಸ್ತ್ರ ಮಳಿಗೆಯ ಕೆಲಸ ಕಾರ್ಯ ನಡೆಯುತ್ತಿತ್ತು. ಭಾನುವಾರ ರಾತ್ರಿಯೂ ಮಳಿಗೆಯ ಒಳಗಡೆ ಇಲೆಕ್ಟ್ರ್ರೀಷಿಯನ್ ಕೆಲಸ ಭರದಲ್ಲಿ ನಡೆಯುತ್ತಿತ್ತು.

ನಡುರಾತ್ರಿ ಸುಮಾರು 1.30 ಗಂಟೆ ವೇಳೆ ಸಲ್ಮಾನ್ ಗೆ ವಿದ್ಯುತ್ ಆಘಾತವಾಗಿದ್ದು, ಜೊತೆಗಿದ್ದ ಕಾರ್ಮಿಕರು ಕೂಡಲೇ ಆತನನ್ನ ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆಸ್ಪತ್ರೆ ದಾರಿಯಲ್ಲಿ ಸಲ್ಮಾನ್ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹೊಸ ಬಟ್ಟೆಯಂಗಡಿ ಇದೇ ಶುಕ್ರವಾರ ಶುಭಾರಂಭಗೊಳ್ಳುವುದರಲ್ಲಿತ್ತು.

ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.