ಉಡುಪಿ: ಶ್ರೀ ಸತ್ಯಯುಗ ಯೋಗಾಶ್ರಮ (ರಿ.), ಶ್ರೀ ಗುರು ಕ್ಷೇತ್ರ ಕುತ್ಪಾಡಿ, ಉಡುಪಿ ಇದರ ವಾರ್ಷಿಕ ಮಂಗಲೋತ್ಸವವು ತಾ. 12-04-2026ರಂದು ಆದಿತ್ಯವಾರ ಸಂಜೆ 6.00 ಗಂಟೆಗೆ ಆರಂಭವಾಗಲಿದ್ದು, ತಾ. 14-04-2026 ಮಂಗಳವಾರ ರಾತ್ರಿ 8.00 ಗಂಟೆಯವರೆಗೆ ಅಖಂಡ ಹರಿನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮದೊಂದಿಗೆ ನಡೆಯಲಿದೆ. ಬಳಿಕ ಮಹಾ ಮಂಗಲೋತ್ಸವ ಜರುಗಲಿದೆ.

ತಾ.14-04-2026 ರಂದು ಮಧ್ಯಾಹ್ನ 12.00 ಗಂಟೆಯಿಂದ ಭಕ್ತಾದಿಗಳಿಗೆ “ಮಹಾ ಅನ್ನಸಂತರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತಾ.15-04-2026 ಬುಧವಾರ ಸಂಜೆ 6.30 ರಿಂದ 8.30ರವರೆಗೆ ಆಶ್ರಮದ ವಠಾರದಲ್ಲಿ ಆಕಾಶವಾಣಿ ಕಲಾವಿದೆ ಮಂಜುಳಾ ಜಿ. ರಾವ್ ಇವರಿಂದ ಹರಿಕಥಾ ಕಾರ್ಯಕ್ರಮ ನಡೆಯಲಿದೆ.

ತಾ.16-04-2026 ಗುರುವಾರ ರಾತ್ರಿ 9.00 ಗಂಟೆಯಿಂದ ಆಶ್ರಮದ ವಠಾರದಲ್ಲಿ ಶ್ರೀ ರಾಮಕೃಷ್ಣ ಯಕ್ಷಗಾನ ಕಲಾ ಮಂಡಳಿ ಇದರ ಸದಸ್ಯರಿಂದ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಡಾನಿಡಿಯೂರು ಕೇಶವ ರಾವ್ ಅವರ ನಿರ್ದೇಶನದಲ್ಲಿ “ಶ್ರೀ ಶನೀಶ್ವರ ಮಹಾತ್ಮೆ” ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.



ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯುವಂತೆ ಆಶ್ರಮದ ಪ್ರಕಟಣೆ ತಿಳಿಸಿದೆ.







