ಶಂಕರನಾರಾಯಣ: ಕುಂದಾಪುರದ ಸಮೀಪ ಆಶೋಕ್ ಲೇಲ್ಯಾಂಡ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದಾಗ ಪೊಲೀಸರು ಮೂವರನ್ನು ವಾಹನ ಸಹಿತ ವಶಪಡಿಸಿಕೊಂಡಿದ್ದಾರೆ.
ಬಂಧಿತರು ಮುಸ್ತಾಕ್ ಹುಸೇನ್, ಇರ್ಫಾನ್ ಇಬ್ರಾಹಿಂ, ಮೊಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿ ಇದ್ದ ಸೊತ್ತುಗಳನ್ನು ವಶಪಡಿಸಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಘಟನೆ ವಿವರ: ದಿನಾಂಕ 28.05.2025 ರಂದು ಬೆಳಗಿನ ಜಾವ 03.30 ಘಂಟೆಗೆ ಆರೋಪಿಗಳು ಕೆ.ಎ. 25 ಎ.ಬಿ. 7131 ನೇ ನಂಬ್ರದ ಅಶೋಕ್ ಲೈಲ್ಯಾಂಡ್ ಕಂಪೆನಿಯ ದೋಸ್ತ್ ವಾಹನದಲ್ಲಿ ಯಾವುದೇ ಪರವಾನಿಗೆ ಹೊಂದದೇ ಕಪ್ಪು ಬಣ್ಣದ ಗಂಡು ದನ-1, ಕಂದು ಬಣ್ಣದ ಗಂಡು ದನ-1, ಬಿಳಿ ಬಣ್ಣದ ಗಂಡು ದನ-1 ನ್ನು, ಆರೋಪಿತ 1. ಮುಸ್ತಾಕ್ ಹುಸೇನ್ ಸಾಬ್ ನದಾಫ್ 2. ಇರ್ಫಾನ್ ಇಬ್ರಾಹಿಂ ಸಾಬ್ ಜಮಾದಾರ್ 3. ಮೊಹಮ್ಮದ್ ಆದಿಲ್ ಭಟ್ಕಳ ಇವರುಗಳು ಸಂಘಟಿತರಾಗಿ ಮಹಾರಾಷ್ಟ್ರ ಕಡೆಯಿಂದ ಕಳವು ಮಾಡಿಕೊಂಡು ಅವುಗಳಿಗೆ ಯಾವುದೇ ಮೇವು ಬಾಯಾರಿಕೆ ನೀಡದೇ ಹಿಂಸಿಸುವ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ವಧೆ ಮಾಡಲು, ಭಟ್ಕಳದ ಮೊಹಮ್ಮದ್ ಆದಿಲ್ ಜೊತೆ ಸೇರಿ ದನಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಐರಬೈಲು ಎಂಬಲ್ಲಿ ಸಿದ್ದಾಪುರ-ಶಂಕರನಾರಾಯಣ ರಸ್ತೆಯಲ್ಲಿ ಶಂಕರನಾರಾಯಣ ಕಡೆಗೆ ಸಾಗಾಟ ಮಾಡುತ್ತಿದ್ದರು ಈ ಸಮಯ ಶಂಭುಲಿಂಗಯ್ಯ ಎಮ್.ಇ. ಪೊಲೀಸ್ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್ ಠಾಣೆ ಇವರು 3 ಗಂಡು ದನಗಳು ಅಂದಾಜು ಮೌಲ್ಯ 45,000/-, ಕೆ.ಎ. 25 ಎ.ಬಿ. 7131 ನೇ ವಾಹನ ಅಂದಾಜು ಮೌಲ್ಯ 3,00,000 ಹಾಗೂ ವಿವೋ ಮೊಬೈಲ್-1 ಅಂದಾಜು ಮೌಲ್ಯ 10,000/- ಹಾಗೂ ಒಪ್ಪೊ ಮೊಬೈಲ್-1 ಅಂದಾಜು ಮೌಲ್ಯ 5,000/- ವನ್ನು ವಶಪಡಿಸಿಕೊಂಡು ಆರೋಪಿ ಗಳನ್ನು ದಸ್ತಗಿರಿ ಮಾಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣಾ 53/2025 ಕಲಂ 4,5,7,12 ಕರ್ನಾಟಕ ಗೋ ಹತ್ಯಾ ನಿಷೇಧ ಕಾಯ್ದೆ ಮತ್ತು ಕಲಂ 11(1) (ಡಿ) ಪ್ರಾಣಿ ಹಿಂಸಾ ಪ್ರತಿಬಂಧಕ ತಡೆ ಕಾಯ್ದೆ 1966. ಮತ್ತು ಸೆಕ್ಷನ್ 66 ಜೊತೆಗೆ 192(ಎ) ಐ.ಎಮ್.ವಿ. ಆಕ್ಟ್ ಹಾಗೂ ಕಲಂ: 112, 303(2) BNS ನಂತೆ ಪ್ರಕರಣ ದಾಖಲಾಗಿರುತ್ತದೆ.