Home Kundapura News ಮರವಂತೆಯಲ್ಲಿ ದಡಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನು…!!

ಮರವಂತೆಯಲ್ಲಿ ದಡಕ್ಕೆ ಬಂದ ರಾಶಿ ರಾಶಿ ಬೂತಾಯಿ ಮೀನು…!!

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರದ ಮರವಂತೆ ಮಾರಸ್ವಾಮಿ ದೇವಸ್ಥಾನದ ಎದುರಿನ ಕಡಲ ತೀರಕ್ಕೆ ರಾಶಿ ರಾಶಿ ಬೂತಾಯಿ ಮೀನುಗಳು ಬಂದಿದ್ದು, ಮೀನುಗಳನ್ನು ಹೆಕ್ಕಲು ಜನ ಮುಗಿಬಿದ್ದ ದೃಶ್ಯ ಕಂಡು ಬಂದಿದೆ.

ಇಂದು ಮಧ್ಯಾಹ್ನದ ವೇಳೆಗೆ ರಾಶಿ ರಾಶಿ ಮೀನುಗಳು ದಡಕ್ಕೆ ಅಪ್ಪಳಿಸಿವೆ. ಇದನ್ನು ಕಂಡ ಮೀನು ಪ್ರಿಯರು ಚೀಲಗಳಲ್ಲಿ ತುಂಬಿಸಿಕೊoಡು ಕೊಂಡೊಯ್ದಿದ್ದಾರೆ. ಕೆಲವರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.