ಮೂಡುಬಿದಿರೆ : ನಗರದ ಹೊರವಲಯದ ವಿದ್ಯಾಗಿರಿ-ಮೂಡುಬಿದಿರೆ ರಸ್ತೆಯ ಗಾಂಧಿನಗರದಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ನ ಹಿಂಬದಿ ಸವಾರ ಮೃತಪಟ್ಟ ಘಟನೆ ನಡೆದಿದೆ.
ಕೊಪ್ಪದ ಕುಮೇರು ಸಮೀಪದ ಮರಕಡ ನಿವಾಸಿ ಚಂದು ಕುಮಾರ್ (24) ಮೃತಪಟ್ಟ ಯುವಕ.
ಕಟ್ಟಡ ಕಾಮಗಾರಿಯಲ್ಲಿ ಸಹಾಯಕರಾಗಿ ದುಡಿಯುತ್ತಿದ್ದ ಚಂದು ಕುಮಾರ್ ಎಂದಿನಂತೆ ಮೇಸ್ತ್ರಿ ಯಾದವ್ ಅವರ ಬೈಕ್ನಲ್ಲಿ ಕೆಲಸಕ್ಕೆ ತೆರಳುತ್ತಿದ್ದರು.
ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಲಾರಿ ಬೈಕ್ಗೆ ಢಿಕ್ಕಿ ಹೊಡೆದ ಪರಿಣಾಮ ಚಂದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಬೈಕ್ ಸವಾರಿ ಮಾಡುತ್ತಿದ್ದ ಯಾದವ್ ಅಪಾಯದಿಂದ ಪಾರಾಗಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.