Home Crime ಬ್ರಹ್ಮಾವರ: ಅಕ್ರಮ ಮರಳು ಸಂಗ್ರಹ : ಪ್ರಕರಣ ದಾಖಲು…!!

ಬ್ರಹ್ಮಾವರ: ಅಕ್ರಮ ಮರಳು ಸಂಗ್ರಹ : ಪ್ರಕರಣ ದಾಖಲು…!!

ಬ್ರಹ್ಮಾವರ: ಪರವಾನಿಗೆ ಇಲ್ಲದೆ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯ ವಿರುದ್ಧ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪೊಲೀಸ್ ಉಪನಿರೀಕ್ಷಕಿ ಮುಕ್ತಾಬಾಯಿ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅ.27 ರಂದು ಬೆಳಿಗ್ಗೆ ಬ್ರಹ್ಮಾವರ ಠಾಣಾ ಸರಹದ್ದಿನ ಹನೇಹಳ್ಳಿ ಗ್ರಾಮದ ಪಂಚಮಿಕಾನ ನೀಲಾವರ ಸೇತುವೆ ಬಳಿ ದಾಳಿ ನಡೆಸಲಾಗಿದೆ.

ಈ ವೇಳೆ ಸೀತಾ ನದಿ ದಡದಲ್ಲಿ ಆರೋಪಿ ಪ್ರದೀಪ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಸೀತಾ ನದಿಯಿಂದ ಕದ್ದು ತೆಗೆದು, ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಸುಮಾರು 20 ಪ್ಲಾಸ್ಟಿಕ್ ಬುಟ್ಟಿಯಷ್ಟು ಮರಳು ಹಾಗೂ ಮರಳು ತೆಗೆಯಲು ಬಳಸಿದ ಕಬ್ಬಿಣದ ಹಾರೆಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ