Home Crime ಉಡುಪಿ: ಬನ್ನಂಜೆಯಲ್ಲಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವು…!!

ಉಡುಪಿ: ಬನ್ನಂಜೆಯಲ್ಲಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವು…!!

ಉಡುಪಿ: ನಗರದ ಬನ್ನಂಜೆಯಲ್ಲಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ನಡೆದಿದೆ.

ದೂರುದಾರರನ್ನು ಡುಂಗೂರು ರಾಮ್ (45), ತಂದೆ ಶಂಕರ್ ಲಾಲ್, ವಾಸ ಕಾಮತ್ ಬಿಲ್ಡಿಂಗ್, ಮಹಾಲಿಂಗೇಶ್ವರ ದೇವಸ್ಥಾನದ ಎದುರು, ಬನ್ನಂಜೆ ಎಂದು ಗುರುತಿಸಲಾಗಿದೆ. ಇವರು KA-20 EW-1615 ನಂಬರಿನ ಪಲ್ಸರ್ ಬೈಕ್‌ನ್ನು ಹೊಂದಿದ್ದರು.

ದಿನಾಂಕ 23-11-2026 ರಂದು ಬ್ರಹ್ಮಗಿರಿಯಲ್ಲಿ ಕೆಲಸ ಮುಗಿಸಿ ರಾತ್ರಿ 9:30 ಗಂಟೆಗೆ ಬೈಕ್‌ನ್ನು ಬನ್ನಂಜೆ ಕಾಮತ್ ಬಿಲ್ಡಿಂಗ್‌ನ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದರು. ಮರುದಿನ ದಿನಾಂಕ 24-11-2026 ರಂದು ಬೆಳಿಗ್ಗೆ 7:00 ಗಂಟೆಗೆ ಬಂದು ನೋಡಲಾಗಿ ಬೈಕ್ ಇಟ್ಟ ಸ್ಥಳದಲ್ಲಿ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ.

ದಿನಾಂಕ 23-11-2026 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ 24-11-2026 ರ ಬೆಳಿಗ್ಗೆ 7:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಬೈಕ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಬೈಕಿನ ಅಂದಾಜು ಮೌಲ್ಯ ರೂ. 50,000 ಆಗಿರಬಹುದಾಗಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.