ಕಡಬ: ಕಾರು ಮತ್ತು ಹಣ್ಣು-ಹಂಪಲು ತುಂಬಿಸಿಕೊಂಡು ಬರುತ್ತಿದ್ದ ಮಹೇಂದ್ರ ಜೀತಾ ವಾಹನ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಜೀತಾ ವಾಹನದ ಸಹ ಪ್ರಯಾಣಿಕ ಮೃತಪಟ್ಟು, ಮೂವರಿಗೆ ಗಾಯಗಳಾದ ಘಟನೆ ಕಡಬ ಅಲಂಕಾರು ಗ್ರಾಮದ ನೆಕ್ಕರೆಯಲ್ಲಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿಯನ್ನು ತಮೀಮ್ ಎಂದು ತಿಳಿಯಲಾಗಿದೆ ಮ
ಬೆಳಿಗ್ಗೆ ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ KA-21-MA-8490 ನೋಂದಣಿಯ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ, ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಹಣ್ಣು-ಹಂಪಲು ತುಂಬಿಸಿಕೊಂಡು ಬರುತ್ತಿದ್ದ KA-21-B-2940 ನೋಂದಣಿಯ ಮಹೇಂದ್ರ ಜೀತಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಮಹೇಂದ್ರ ಜೀತಾ ವಾಹನದ ಚಾಲಕ ಖಲೀಲ್, ಸಹ ಪ್ರಯಾಣಿಕ ತಮೀಮ್ ಹಾಗೂ ಕಾರು ಚಾಲಕನಿಗೆ ಗಾಯಗಳಾಗಿವೆ. ಸ್ಥಳದಲ್ಲಿದ್ದವರು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆಸ್ಪತ್ರೆಗೆ ಕರೆತಂದಾಗ ತಮೀಮ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

