Home Crime ಶಿರ್ವಾ: ಬೈಕ್ ಸ್ಕಿಡ್ ಆಗಿ ಕಾಂಪೌಂಡ್ ಗೋಡೆಗೆ ಡಿಕ್ಕಿ : ಸವಾರ ಸಾವು…!!

ಶಿರ್ವಾ: ಬೈಕ್ ಸ್ಕಿಡ್ ಆಗಿ ಕಾಂಪೌಂಡ್ ಗೋಡೆಗೆ ಡಿಕ್ಕಿ : ಸವಾರ ಸಾವು…!!

ಶಿರ್ವಾ: ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಮೂಡುಬೆಳ್ಳೆಯಲ್ಲಿ ನಡೆದಿದೆ.

ಮೃತರು ಸುಕೇಶ್ ಆಚಾರ್ಯ, ಬೈಕ್ ನಂಬರ್ KA-20-HJ-1703 ರ ಸವಾರ ಎಂದು ಗುರುತಿಸಲಾಗಿದೆ.

ನ.09 ರಂದು ಸಂಜೆ 4:45ಕ್ಕೆ ಕಾಪು ತಾಲೂಕು ಮೂಡುಬೆಳ್ಳೆ ಗ್ರಾಮದ ಎಡ್ಮೇರು ತಿರುವಿನಲ್ಲಿ ಹಾದುಹೋಗಿರುವ ಪಳ್ಳಿ-ನಿಂಜೂರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಸುಕೇಶ್ ಆಚಾರ್ಯ ಅವರು ನಾಲ್ಕು ಬೀದಿ ಕಡೆಯಿಂದ ಪಳ್ಳಿ ಕಡೆಗೆ ಬೈಕ್ ಸವಾರಿ ಮಾಡಿಕೊಂಡು ಹೋಗುತ್ತಿದ್ದರು.

ಈ ವೇಳೆ ಬೈಕ್ ಸ್ಕಿಡ್ ಆಗಿ ರಸ್ತೆ ಬದಿಯ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ತೋರಿಸಿದಾಗ ಸುಕೇಶ್ ಆಚಾರ್ಯ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.