Home Crime ಕಾರ್ಕಳ: ಅಡಿಕೆ ಮರದಿಂದ ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು…!!

ಕಾರ್ಕಳ: ಅಡಿಕೆ ಮರದಿಂದ ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು…!!

ಕಾರ್ಕಳ: ಅಡಿಕೆ ಕೊಯ್ಯುವಾಗ ಮಳೆಯಿಂದಾಗಿ ಮರದಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಮೃತರು ತನಿಯಪ್ಪ (52), ಪಜಿಲಗುರಿ, ನೆಲ್ಲಿಮನೆ, ರೆಂಜಾಳ ಗ್ರಾಮ, ಕಾರ್ಕಳ ತಾಲೂಕು ಎಂದು ತಿಳಿದು ಬಂದಿದೆ.

ಮಗ ಸಂತೋಷ್ ಕುಮಾರ್ (28) ನೀಡಿದ ದೂರಿನಂತೆ, ತನಿಯಪ್ಪ ಅವರು ನ.04 ರಂದು ಬೆಳಿಗ್ಗೆ 10:30ಕ್ಕೆ ರೆಂಜಾಳ ಗ್ರಾಮದ ಯಶೋಧರ್ ಜೈನ್ ಅವರ ಮನೆಯ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದರು. ಅಡಿಕೆ ಮರಕ್ಕೆ ಹತ್ತಿ ಅಡಿಕೆ ಕೊಯ್ಯುತ್ತಿರುವಾಗ ಅಕಾಲಿಕ ಮಳೆ ಸುರಿದಿದೆ. ಮರದಿಂದ ಇಳಿಯುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ಕೆಳಗೆ ಬಿದ್ದು ಕುತ್ತಿಗೆಯ ಹಿಂಭಾಗಕ್ಕೆ ಒಳಗಾಯವಾಗಿದೆ.

ಕೂಡಲೇ ಅವರನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಲಾಗಿತ್ತು. ಅಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನಿಯಪ್ಪ ಅವರು ನ.09 ರಂದು ಮಧ್ಯಾಹ್ನ 1:47ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.