ಉಡುಪಿ : ಥೈಲ್ಯಾಂಡ್ ನಲ್ಲಿ ನಡೆದ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026 ರ ಫೈನಲ್ ನಲ್ಲಿ ಉಡುಪಿಯ ಸಚಿತ ರಾವ್ ಅವರು ಮೊದಲ ಪ್ರಶಸ್ತಿ ಗಳಿಸಿ ಉಡುಪಿ, ಕರ್ನಾಟಕ ಹಾಗೂ ಭಾರತ ದೇಶಕ್ಕೆ ಕೀರ್ತಿ ತಂದಿರುತ್ತಾರೆ.
ಹಾಗೂ ವಿಶೇಷವೆಂದರೆ ಇವರು ಭಾಗವಯಿಸಿದ 9 ಫ್ಯಾಷನ್ ಶೋ ಗಳಲ್ಲಿ ಎಲ್ಲದರಲ್ಲೂ ಪ್ರಶಸ್ತಿ ಗಳಿಸಿದ ಭಾರತದ ಮೊದಲ ಬಾಲಪ್ರತಿಭೆ ಎಂದು ತಿಳಿದು ಬಂದಿದೆ.
ಸುಮಾರು 31 ದೇಶ ದಿಂದ ಭಾಗವಯಿಸಿದ ಈ ಸ್ಪರ್ಧೆ ಯಲ್ಲಿ ತೀವ್ರ ಪೈಪೋಟಿ ನೀಡಿದ ಇವರು ಎಲ್ಲಾ ವಿಭಾಗ ದಲ್ಲೂ ಯಶಸ್ಸು ಕಂಡು ಕೊನೆಯದಾಗಿ ವಿನ್ನರ್ ಕಿರೀಟ ತನ್ನದಾಗಿಸಿ ಕೊಂಡರು..
ಅವರಿಗೆ ಸಹಕಾರ ನೀಡಿದ ಉಡುಪಿ, ಕರ್ನಾಟಕ ಹಾಗೂ ಭಾರತದ ಜನತೆಗೆ ಧನ್ಯವಾದ ತಿಳಿಸಿದರು…




