Home Latest ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ ಹಾಗು ಮಣಿಪಾಲ ಹೆರಿಗೆ ಹಾಗೂ...

ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ ಹಾಗು ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಸಂಯುಕ್ತ ಅಂತರಾಷ್ಟ್ರೀಯ ಯೋಗ ದಿನಾಚರಣೆ..!!

ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ ಹಾಗು ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಐಎಂಎ ಭವನದಲ್ಲಿ ನಡೆಸಲಾಯಿತು.

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ರಾಜಯೋಗಿ ಅವಿನಾಶ್ ವಂಕರ್ ಆಗಮಿಸಿ ಮಾಹಿತಿ ನೀಡುತ್ತಾ ಯೋಗ ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಶ್ರೀ ಪಾಲಡಿ ಪ್ರಸ್ತಾವನೆ ಮಾತುಗಳನ್ನಾಡಿ ಯೋಗದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರಾಜಯೋಗಿ ಅವಿನಾಶ್ ವಂಕರ್ ರವರನ್ನು ಅಭಿನಂದಿಸಲಾಯಿತು.

ಐಎಂಎ ಉಡುಪಿ ಕರಾವಳಿ ಕಾರ್ಯದರ್ಶಿಡಾ. ಮಾನಸ್, ಕೋಶಾಧಿಕಾರಿ ಡಾ. ಸನತ್ ರಾವ್, ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಇಂದಿರಾ ಶಾನುಬೋಗ್, ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಯೋಗ ಪಟು ಡಾ. ಅನ್ನಪೂರ್ಣ ಹಾಗು ಶಿಷ್ಯೆಯರಿಂದ ಯೋಗಾಸನ ಪ್ರಾತ್ಯಕ್ಷಿಕೆ ನಡೆಯಿತು. ಐಎಂಎ ಮಹಿಳಾ ವಿಭಾಗದವರಿಂದ ಯೋಗ ನೃತ್ಯ ಉತ್ತಮವಾಗಿ ಮೂಡಿ ಬಂತು.

ಡಾ ಶರತ್ ಐಎಂಎ ಪ್ರಾರ್ಥನೆ ವಾಚಿಸಿದರು. ಮಣಿಪಾಲ ಹೆರಿಗೆ ಹಾಗೂ ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ರಾಜಲಕ್ಷ್ಮೀ ಸ್ವಾಗತಿಸಿದರು. ಕೋಶಾಧಿಕಾರಿ ಡಾ. ಅಂಜಲಿ ಮುಂಡ್ಕೂರು ಹಾಗು ಡಾ. ರಂಜಿತಾ ನಾಯಕ್ ನಿರೂಪಿಸಿದರು. ಐಎoಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್ ಧನ್ಯವಾದವಿತ್ತರು