Home Crime ಬೆಳಗಾವಿ: ಮೂರು ವರ್ಷದ ಬಾಲಕನ ಕೊಲೆ : ಮಲತಂದೆ ಸೇರಿ ನಾಲ್ವರು ವಶಕ್ಕೆ…!!

ಬೆಳಗಾವಿ: ಮೂರು ವರ್ಷದ ಬಾಲಕನ ಕೊಲೆ : ಮಲತಂದೆ ಸೇರಿ ನಾಲ್ವರು ವಶಕ್ಕೆ…!!

ಬೆಳಗಾವಿ: ಮಲತಂದೆ ಮತ್ತು ಆತನ ಸ್ನೇಹಿತರು ಸೇರಿ ಮೂರು ವರ್ಷದ ಬಾಲಕನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ಹಾರೂಗೊಪ್ಪ ಗ್ರಾಮದ ಬಳಿ ನಿನ್ನೆ ರಾತ್ರಿ ನಡೆದಿದೆ.

ಬಿಹಾರ ಮೂಲದ ಕಾರ್ತಿಕ್​ ಮುಖೇಶ್​ ಮಾಂಜಿ(3) ಕೊಲೆಯಾದ ಬಾಲಕ. ಆತನ‌ ಮಲತಂದೆ ಮಹೇಶ್ವರ ಮಾಂಜಿ ಕೊಲೆ ಮಾಡಿದ ಆರೋಪಿ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ, ಮುರಗೋಡ ಸಿಪಿಐ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್​ ಗುಳೇದ ಅವರು ಮಾತನಾಡಿ, “ಇದು ಹೃದಯ ವಿದ್ರಾವಕ ಘಟನೆ. ಮೂರು ವರ್ಷದ ಬಾಲಕನನ್ನು ಮಲ ತಂದೆ ಮತ್ತು ಆತನ ಸಂಗಡಿಗರು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಬಾಲಕನ ತಾಯಿ ರಂಗೀಲಾ ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಕೊಲೆಯಾದ ಬಾಲಕನ ಮಲ‌ತಂದೆ ಮಹೇಶ್ವರ ಮಾಂಜಿ ಮತ್ತು ಆತನ ಸ್ನೇಹಿತರಾದ ರಾಕೇಶ ಮಾಂಜಿ, ಶಿವನಾಥ ಮಾಂಜಿ, ಮಹೇಶ ಮಾಂಜಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದೇವೆ” ಎಂದರು.