ಶಿರ್ವಾ: ಉಡುಪಿ ಜಿಲ್ಲೆಯ ಶಿರ್ವ ಸಮೀಪ ಜುವೆಲ್ಲರ್ಸ್ ಒಂದರಲ್ಲಿ ಮಹಿಳೆ ಹಾಗೂ ಇಬ್ಬರು ಸೇರಿ ಚಿನ್ನಾಭರಣಗಳನ್ನು ಖರೀದಿಸಿ ಹಣ ಪಾವತಿಸದೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಘಟನೆ ನಡೆದಿದೆ.
ಶಿರ್ವದ ನ್ಯೂ ಭಾರ್ಗವಿ ಜುವೆಲ್ಲರ್ಸ್ ” ಮಾಲೀಕ ಗಣೇಶ್ ಎಂಬವರಿಗೆ ವಂಚನೆಯಾಗಿದೆ.
ವಂಚನೆ ಗೈದ ಆರೋಪಿಗಳು ಫರೀದಾ ಹಾಗೂ ಅಪ್ಸಲ್ ಎಂದು ತಿಳಿದು ಬಂದಿದೆ.
ಶಿರ್ವ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ಗಣೇಶ್( 52), ಶಿರ್ವ ಗ್ರಾಮ, ಕಾಪು ಇವರು ಶಿರ್ವ ಪೇಟೆಯ ಬಳಿ “ ನ್ಯೂ ಭಾರ್ಗವಿ ಜುವೆಲ್ಲರ್ಸ್ ” ಎಂಬ ಹೆಸರಿನ ಚಿನ್ನಾಭರಣಗಳ ಮಳಿಗೆಯನ್ನು ನಡೆಸಿಕೊಂಡು ಬರುತ್ತಿದ್ದು, ದಿನಾಂಕ 08/03/2025 ರಿಂದ 11/03/2025 ರ ದಿನಗಳಂದು ಆರೋಪಿ ಫರೀದಾ ಎಂಬಾಕೆಯು ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ನಂಬಿಸಿ ಆರೋಪಿ ಅಪ್ಸಲ್ ಮತ್ತು ಇತರ ಇಬ್ಬರು ಸಂಬಂಧಿಕರ ಮುಖಾಂತರ ಪಿರ್ಯಾದಿದಾರರ ಅಂಗಡಿಯಿಂದ ರೂಪಾಯಿ 1,78,000/- ಮೊತ್ತದ 69.165 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ಮೋಸ, ವಂಚನೆ ಎಸಗಿರುತ್ತಾರೆ. ಅಲ್ಲದೇ ಆರೋಪಿ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಕೃಪಾ ಜುವೆಲ್ಲರ್ಸ್ ನ ಅನುಷ್ ರವರಿಗೂ ಫೋನ್ ಕರೆ ಮಾಡಿ, ಅವರನ್ನು ನಂಬಿಸಿ ದಿನಾಂಕ 16/03/2025 ರಂದು ಒಟ್ಟು 10.740 ಗ್ರಾಂ ತೂಕದ ವಿವಿಧ ಮಾಧರಿಯ ಚಿನ್ನಾಭರಣಗಳನ್ನು ಖರೀದಿಸಿ, ಆರೋಪಿ ಅಪ್ಸಲ್ ಮುಖಾಂತರ ಮಂಗಳೂರಿನಲ್ಲಿ ಪಡೆದುಕೊಂಡು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ಮೋಸ, ವಂಚನೆ ಎಸಗಿರುತ್ತಾರೆ. ಮೇಲಿನ 2 ಪ್ರಕರಣಗಳು ಅಲ್ಲದೇ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಪುಷ್ಪಾ ಜುವೆಲ್ಲರ್ಸ್ ನ ಶ್ರೀಹರ್ಷರವರಿಗೂ ಫೋನ್ ಕರೆ ಮಾಡಿ, ಅವರನ್ನು ನಂಬಿಸಿ ದಿನಾಂಕ 09/04/2025 ಒಟ್ಟು 18.660 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ಮೋಸ, ವಂಚನೆ ಎಸಗಿರುವುದಾಗಿ ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2025 ಕಲಂ: 318(4), 3(5) BNS ರಂತೆ ಪ್ರಕರಣ ದಾಖಲಾಗಿರುತ್ತದೆ.