Home Latest ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ರಜತ ವರ್ಷೋತ್ಸವ: ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ‘ಶಿವಾರ್ಪಣಂ’ ನೃತ್ಯಾರ್ಪಣ..!

ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ರಜತ ವರ್ಷೋತ್ಸವ: ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ‘ಶಿವಾರ್ಪಣಂ’ ನೃತ್ಯಾರ್ಪಣ..!

ಉಡುಪಿ : ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ಇದರ “ರಜತ ವರ್ಷ” – ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆಯ 5ನೆ ಕಾರ್ಯಕ್ರಮ: “ಶಿವಾರ್ಪಣಂ” ನಾಟ್ಯದಿದೇವನಿಗೆ ನೃತ್ಯಾರ್ಪಣ  ಶಿವರಾತ್ರಿಯಂದು ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಉಪ್ಪೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ರಾಜು ಪೂಜಾರಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಹೂವಯ್ಯ ಸರ್ವೆಗಾರ್, ಕಲಾಬಿಮಾನಿ ಶ್ರೀಮತಿ ಸ್ವರೂಪ್ ಹೆಗ್ಡೆ , ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಕರುಣಾಕರ್ ರಾವ್ ಉಪ್ಪೂರು ಉಪಸ್ಥಿತರಿದ್ದರು.

ತದನಂತರ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯಾರ್ಪಣ ಕಾರ್ಯಕ್ರಮ ನಡೆಯಿತು

ಶ್ರೀ ಭ್ರಾಮರೀ ನಾಟ್ಯಾಲಯ ಅಮ್ಮುಂಜೆ ಇದರ ನಿರ್ದೇಶಕರು ಹಾಗೂ ಗುರುಗಳಾದ ವಿದ್ವಾನ್ ಶ್ರೀ ಕೆ ಭವಾನಿ ಶಂಕರ್ ಅವರು ಸರ್ವರಿಗೂ ಸ್ವಾಗತಿಸಿ ಅವಕಾಶ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಶ್ರೀ ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು.