Home Crime ಬೆಳ್ತಂಗಡಿ: ಸಂಚಾರಿ ಸ್ಟುಡಿಯೋ ಯೂಟ್ಯೂಬರ್‌ ಸಂತೋಷ್‌ ಕಡಬ ಬಂಧನ…!!

ಬೆಳ್ತಂಗಡಿ: ಸಂಚಾರಿ ಸ್ಟುಡಿಯೋ ಯೂಟ್ಯೂಬರ್‌ ಸಂತೋಷ್‌ ಕಡಬ ಬಂಧನ…!!

ಬೆಳ್ತಂಗಡಿ: ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದಡಿ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಸಂಚಾರಿ ಸ್ಟುಡಿಯೋ ಯೂಟ್ಯೂಬರ್‌ ಸಂತೋಷ್‌ ಕಡಬಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಸಂತೋಷ್‌ ನನ್ನು ಬುಧವಾರ (ಫೆ.18) ಬಂಧಿಸಿರುವುದಾಗಿ ವರದಿಯಾಗಿದೆ.

ಬುರುಡೆ ಪ್ರಕರಣದ ವಿಚಾರದ ಕುರಿತಂತೆ ಸಂಚಾರಿ ಸ್ಟುಡಿಯೋ ನಿರಂತರವಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವಿಡಿಯೋ ಪ್ರಸಾರ ಮಾಡಿದ ಬಗ್ಗೆ ನ್ಯಾಯಾಲಯ ನಿರ್ಬಂಧ ವಿಧಿಸಿ ಆದೇಶ ನೀಡಿತ್ತು.

ಆದರೆ ಸಂತೋಷ್‌ ಆದೇಶವನ್ನು ಕಡೆಗಣಿಸಿ ವಿಡಿಯೋ ಪ್ರಸಾರ ಮಾಡಿದ್ದು, ಈ ಪ್ರಕರಣದಲ್ಲಿ ಬೆಂಗಳೂರು ಸಿಟಿ ನ್ಯಾಯಾಲಯ 30 ದಿನಗಳ ಜೈಲುಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಸಿಬಂದಿ ಜೊತೆ ಬೆಂಗಳೂರು ಪೊಲೀಸರು ಕಡಬಕ್ಕೆ ಆಗಮಿಸಿ (ಫೆ.18) ಸಂತೋಷ್‌ ಅವರನ್ನು ಸ್ಟುಡಿಯೋದಲ್ಲೇ ವಶಕ್ಕೆ ಪಡೆದುಕೊಂಡಿರುವುದಾಗಿ ವರದಿ ವಿವರಿಸಿದೆ.

ಪ್ರಕರಣದಲ್ಲಿ ಧರ್ಮಸ್ಥಳದ ಪರವಾಗಿ ವಕೀಲ ರಾಜಶೇಖರ್‌ ಹಿಲಿಯಾರು ವಾದ ಮಂಡಿಸಿದ್ದರು.