ಉಡುಪಿ : 2026ರ ಜುಲೈ 1ರಂದು ಕುಂಜಿಬೆಟ್ಟು, ಉಡುಪಿ, ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರೋಟರಿ ಉಡುಪಿ ಕ್ಲಬ್‌ನ ಪದಗ್ರಹಣ ಸಮಾರಂಭ ನಡೆಯಿತು.
ರೋಟರಿ ಉಡುಪಿಯ ನೂತನ ಅಧ್ಯಕ್ಷರಾದ ರೊಟೇರಿಯನ್ ಜೆ. ಗೋಪಾಲಕೃಷ್ಣ ಪ್ರಭು ಹಾಗೂ ನೂತನ ಕಾರ್ಯದರ್ಶಿಯಾದ ರೊಟೇರಿಯನ್ ಗಣಪತಿ ಪ್ರಭು ಅವರನ್ನು ಪದಗ್ರಹಣ ಅಧಿಕಾರಿ ರೊಟೇರಿಯನ್ ಪಿ ಎಚ್ ಎಸ್ ಎಮ್ ಅಲೆನ್ ವಿನಯ್ ಲೂಯಿಸ್, ಡಿ ಜಿ ಎನ್ ಅವರು ಪದಗ್ರಹಣ ಮಾಡಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಏ ಜಿ ರೊಟೇರಿಯನ್ ಪಿ ಎಚ್ ಎಸ್ ಎಮ್ ಅಮಿತ್ ಅರವಿಂದ್, ನಿರ್ಗಮಿತ ಝಡ್ ಎಲ್ ರೊಟೇರಿಯನ್ ಪಿ ಎಚ್ ಎಪ್ ಜನಾರ್ಧನ್ ಭಟ್, ಐಪಿಪಿ ರೊಟೇರಿಯನ್ ಪಿ ಎಚ್ ಎಪ್ ಸೂರಜ್ ಕುಮಾರ್ ವೈ, ಐಪಿಎಸ್ ರೊಟೇರಿಯನ್ ಪಿ ಎಚ್ ಎಪ್ ಅಶೋಕ್ ಕೋಟ್ಯಾನ್ ಹಾಗೂ ರೊಟೇರಿಯನ್ ಮೇಜರ ಡೋನರ್ ಹೇಮಂತ್ ಯು. ಕಾಂತ್ ಅವರನ್ನು ಸನ್ಮಾನಿಸಲಾಯಿತು.
ಈ ದಿನ 3 ಹೊಸ ಸದಸ್ಯರನ್ನು ಕ್ಲಬ್‌ಗೆ ಸೇರ್ಪಡೆಗೊಳಿಸಲಾಯಿತು ಹಾಗೂ ಒಬ್ಬ ನಿರೀಕ್ಷಿತ ಹೊಸ ಸದಸ್ಯರನ್ನು ಪರಿಚಯಿಸಿ ಗುರುತಿಸಲಾಯಿತು.
ಈ ಸಂದರ್ಭದಲ್ಲಿ ನಮ್ಮ ಕ್ಲಬ್ ಹೌಸ್ ಬುಲೆಟಿನ್ ಕೋಂಚ್ ಅನ್ನು ಬಿಡುಗಡೆ ಮಾಡಲಾಯಿತು.
ನಮ್ಮ 8 ಇಂಟರಾಕ್ಟ್ ಶಾಲೆಗಳ ೧೦ ನೇ ತರಗತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 9 ವಿದ್ಯಾರ್ಥಿಗಳಿಗೆ ಸಹಾಯ ಧನ ಚೆಕ್‌ಗಳನ್ನು ವಿತರಿಸುವ ಮೂಲಕ ಹಾಗೂ ಶ್ರೀಕೃಷ್ಣ ವೃದ್ಧಾಶ್ರಮಕ್ಕೆ ಒಂದು ಮಂಚವನ್ನು ಹಸ್ತಾಂತರಿಸುವ ಮೂಲಕ ಎರಡು ಸಮುದಾಯ ಸೇವಾ ಯೋಜನೆಗಳನ್ನು ನೆರವೇರಿಸಲಾಯಿತು.
ನಂತರ ಪದಗ್ರಹಣ ಅಧಿಕಾರಿ ರೊಟೇರಿಯನ್ ಪಿ ಎಚ್ ಎಸ್ ಎಮ್ ಅಲೆನ್ ವಿನಯ್ ಲೂಯಿಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಹೊಸ ತಂಡಕ್ಕೆ ಶುಭವನ್ನು ಹಾರೈಸಿದರು. ರೊಟೇರಿಯನ್ ಗಣಪತಿ ಪ್ರಭು ಅವರು ವಂದನಾರ್ಪಣೆ ಸಲ್ಲಿಸಿದರು. ರೋ. ರಾಮಚಂದ್ರ ಉಪಾಧ್ಯಾಯ ಮತ್ತು ರೋ. ವಿದ್ಯಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.




