Home Dskshina Kannada ಮೂಡುಬಿದಿರೆ: ಚರಂಡಿಗೆ ಬಿದ್ದು ವ್ಯಕ್ತಿ ಮೃತ್ಯು…!

ಮೂಡುಬಿದಿರೆ: ಚರಂಡಿಗೆ ಬಿದ್ದು ವ್ಯಕ್ತಿ ಮೃತ್ಯು…!

ಮೂಡುಬಿದಿರೆ : ಪುತ್ತಿಗೆ ಪದವಿನಲ್ಲಿ ಪುತ್ತಿಗೆ ಮಜ್ಜಿಗುರಿಯಲ್ಲಿರುವ ತನ್ನ ಸಹೋದರಿ ಮನೆಗೆ ಬಂದಿದ್ದ ವ್ಯಕ್ತಿಯೋರ್ವರು ಚರಂಡಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

 

ಮೃತ ವ್ಯಕ್ತಿ ಮಂಗಳೂರು ಕೊಣಾಜೆ ನಿವಾಸಿ ಮಾಧವ (45) ಎಂದು ತಿಳಿದು ಬಂದಿದೆ.

 

ಮಾಧವ ಅವರು ಪುತ್ತಿಗೆ ದೇವಸ್ಥಾನದ ಜಾತ್ರೆಗೆಂದು ಅಕ್ಕನ ಮನೆಗೆ ಬಂದಿದ್ದು ಜಾತ್ರೆ ಮುಗಿಸಿ ಬುಧವಾರ ಮಧ್ಯಾಹ್ನದ ವೇಳೆ ಹಿಂತಿರುಗಿ ಮಂಗಳೂರಿಗೆ ಹೊರಟಿದ್ದರು. ಆದರೆ ಸಂಜೆ ವೇಳೆಗೆ ಅವರ ಮೃತ ದೇಹ ಪುತ್ತಿಗೆ ಯುವಕ ಮಂಡಲದ ಬಳಿಯ ಚರಂಡಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

 

ಘಟನಾ ಸ್ಥಳಕ್ಕೆ ಮೂಡುಬಿದಿರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕುಸಿದು ಬಿದ್ದು ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.